Featured, ಅಂಕಣ, ಸ್ಥಳೀಯ

ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ 16ನೇ ವರ್ಷದ ‘ಮೆಹ್ ಫಿಲೇ ಮದೀನ’ ಸಮಾರೋಪ ಕಾರ್ಯಕ್ರಮ ಇಂದು

ಖ್ಯಾತ ಇಸ್ಲಾಮಿಕ್ ಗಾಯಕರಾದ ಸುಹೈಲ್ ಫೈಝಿ ಕೂರಾಡ್ ಇಂದು ಪೆರಾಜೆ ಮಣ್ಣಿಗೆ

ಪೆರಾಜೆ: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ.) ಪೆರಾಜೆ ಇದರ ಆಶ್ರಯದಲ್ಲಿ ನಡೆದ 16ನೇ ವರ್ಷದ ಮೆಹ್ ಫಿಲೇ ಮದೀನ ಇಸ್ಲಾಮಿಕ್ ಕಾರ್ಯಕ್ರಮಗಳ ಮೆಗಾ ಸರಣಿ ಇಂದು ಸಮಾರೋಪಗೊಳ್ಳಲಿದೆ. ನಾಲ್ಕು ದಿನಗಳ ಕಾಲ ಭಕ್ತಿಭಾವದ ವಾತಾವರಣದಲ್ಲಿ ಸಾಗಿದ ಈ ಕಾರ್ಯಕ್ರಮ ಇಂದು ಅತ್ಯಂತ ಭವ್ಯವಾಗಿ ಸಮಾರೋಪ ಗೊಂಡು ಪೆರಾಜೆ ಮಣ್ಣು ಧಾರ್ಮಿಕ ಸಾನ್ನಿಧ್ಯದಿಂದ ಮತ್ತಷ್ಟು ಪುಳಕಿತ ಗೊಳ್ಳಲಿದೆ, ಪ್ರತಿ ದಿನವೂ ಭಿನ್ನಭಿನ್ನ ವಿಷಯಾಧಾರಿತ ಪ್ರಭಾಷಣಗಳು, ಮದೀನ ಪ್ರೇಮಭಾವದ ಸೂಫಿ ನಾದಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿವೆ.ಇಂದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ಇಸ್ಲಾಮಿಕ್ ಗಾಯಕರಾದ ಸುಹೈಲ್ ಫೈಝಿ ಕೂರಾಡ್ ಹಾಗೂ ಖಾಜಾ ಹುಸೈನ್ ಅವರ ತಂಡದಿಂದ ಅದ್ಧೂರಿಯಾದ ಇಸ್ಲಾಮಿಕ್ ಗಾಯನ ಕಾರ್ಯಕ್ರಮ ಜರುಗಲಿದೆ. ಅದೇ ರೀತಿ ಸಯ್ಯಿದ್ ಕುಂಞಿ ಕೋಯ ತಂಙಳ್ ರವರಿಂದ ಅಜ್ಮೀರ್ ಮೌಲಿದ್ ಕಾರ್ಯಕ್ರಮ ನಡೆಯಲಿದ್ದು, ನೆರೆದ ಜನರಿಗೆ ಆಧ್ಯಾತ್ಮಿಕ ಮನಶಾಂತಿ ನೀಡಲಿದೆ ಪ್ರಭಾಷಣ ಲೋಕದ ಪ್ರಸಿದ್ಧ ಮಿನುಗುತಾರೆ ಉಸ್ಮಾನ್ ಜೌಹರಿ ನೆಲ್ಯಾಡಿ ರವರು ಕಾರ್ಯಕ್ರಮದ ಪ್ರಮುಖ ಪ್ರಭಾಷಣ ನಡೆಸಲಿದ್ದಾರೆ. ಮುಸ್ತಫಾ ಮಸ್ತಾನ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ ಕಾರ್ಯಕ್ರಮದ ಅಂತ್ಯದಲ್ಲಿ ಸೀರಣಿ ವಿತರಣೆ ಜರುಗಲಿದ್ದು, ಈ ಸಮಾರಂಭಕ್ಕೆ ಎಲ್ಲಾ ಭಕ್ತರನ್ನು ಮತ್ತು ಸಾರ್ವಜನಿಕರನ್ನು ಸಂಘಟಕರು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.ಕಾರ್ಯಕ್ರಮದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್, ಸೇವೆ–ಮಾನವೀಯತೆ–ಧಾರ್ಮಿಕ ಅರಿವು ಎಂಬ ಮೂಲಭೂತ ಮೌಲ್ಯಗಳನ್ನು ಸಮೂಹಕ್ಕೆ ಪರಿಚಯಿಸುವಲ್ಲಿ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ.ಇಂದು ರಾತ್ರಿ ನಡೆಯಲಿರುವ ಈ ಭವ್ಯ ಸಮಾರೋಪ ಕಾರ್ಯಕ್ರಮ ಪೆರಾಜೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಪುಟವಾಗಿ ದಾಖಲಾಗುವ ನಿರೀಕ್ಷೆಯಿದೆ.

m

Related Posts