Featured, ಅಂಕಣ, ಸ್ಥಳೀಯ

ಅಚ್ಚರಿ ಎಂಬಂತೆ 1,700 ವರ್ಷದ ಪ್ರಾಚೀನ ಶವಪೆಟ್ಟಿಗೆ ಪತ್ತೆ: ಒಳಗೆ ಕಂಡುಬಂದವು ಆಶ್ಚರ್ಯಕರ ವಸ್ತುಗಳು

ಬುಡಾಪೆಸ್ಟ್‌ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ವಿಚಿತ್ರ ಹಾಗೂ ಇತಿಹಾಸೋಕ್ತ ಘಟನೆಗಳು ಆಗಾಗ ಎದುರಾಗುತ್ತಲೇ ಇವೆ. ಇದೀಗ ಹಂಗೇರಿಯ ಒಬುಡಾ ಪ್ರದೇಶದಲ್ಲಿ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನ ಕಾರ್ಯದಲ್ಲಿ ಸುಮಾರು 1,700 ವರ್ಷಗಳಷ್ಟು ಹಳೆಯ ರೋಮನ್‌ ಶವಪೆಟ್ಟಿಗೆ ಪತ್ತೆಯಾಗಿದೆ. ಶತಮಾನಗಳಿಂದ ಯಾರು ಮುಟ್ಟದಿದ್ದ ಈ ಶವಪೆಟ್ಟಿಗೆ ಪತ್ತೆಯಾಗುತ್ತಿದ್ದಂತೆ ಪ್ರದೇಶದಲ್ಲಿ ಕುತೂಹಲ ಹೆಚ್ಚಿತು.

ಕಲ್ಲಿನಿಂದ ಪೂರ್ಣ ರೂಪದಲ್ಲಿ ಕೆತ್ತಿದ ರೂಮನ್ ಶೈಲಿಯ ಶವಪೆಟ್ಟಿಗೆ ಬುಡಾಪೆಸ್ಟ್‌ನ ಪುರಾತತ್ತ್ವಜ್ಞರು ತೆರೆದ ಈ ಶವಪೆಟ್ಟಿಗೆ ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಿದ ರೋಮನ್‌ ಶೈಲಿಯದ್ದಾಗಿ ತಿಳಿದುಬಂದಿದೆ. ಅದರ ಮೇಲ್ಭಾಗದಲ್ಲಿ ಆ ಕಾಲದ ಕಲಾಶೈಲಿಯನ್ನು ಪ್ರತಿಬಿಂಬಿಸುವ ನಕ್ಷಿ, ಕೆತ್ತನೆಗಳು ಗಮನ ಸೆಳೆಯುತ್ತವೆ.

ಅಸ್ಥಿಪಂಜರದೊಂದಿಗೆ ಅಪರೂಪದ ವಸ್ತುಗಳ ಸಂಗ್ರಹ ಪೆಟ್ಟಿಗೆಯನ್ನು ತೆರೆದಾಗ ಪ್ರಾಚೀನ ರೋಮನ್ ಸಮಾಜದಲ್ಲಿ ವಾಸಿಸಿದ್ದ ಯುವತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ಜೊತೆಗೆ ಪೆಟ್ಟಿಗೆಯೊಳಗೆ ಕೆಳಗಿನಂತಹ ಅಮೂಲ್ಯ ವಸ್ತುಗಳೂ ದೊರಕಿವೆ:ಗಾಜಿನ ಜಾಡಿಗಳು ಕಂಚಿನ ಪ್ರತಿಮೆಗಳು ಸುಮಾರು 140 ರೂಮನ್ ನಾಣ್ಯಗಳು ಹೇರ್ಪಿನ್‌ಗಳು ಆಭರಣಗಳು ಚಿನ್ನದ ನೂಲು ಬಳಸಿ ತಯಾರಿಸಿದ್ದ ಬಟ್ಟೆಯ ಅವಶೇಷಗಳುಈ ವಸ್ತುಗಳು ಯುವತಿ ಶ್ರೀಮಂತ ಮನೆತನಕ್ಕೆ ಸೇರಿದ್ದಾಳೆ ಎಂಬುದನ್ನು ಸೂಚಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಆ ಕಾಲದಲ್ಲಿ ಇಂಥ ಶವಪೆಟ್ಟಿಗೆಗಳನ್ನು ಸಮಾಜದಲ್ಲಿ ಪ್ರತಿಷ್ಠೆ ಹೊಂದಿದ್ದ ವ್ಯಕ್ತಿಗಳಿಗಷ್ಟೇ ಬಳಸಲಾಗುತ್ತಿತ್ತಂತೆ.

4ನೇ ಶತಮಾನಕ್ಕೆ ಸೇರಿದ ಪೆಟ್ಟಿಗೆ ಸಂಶೋಧನೆ ಪ್ರಕಾರ ಈ ಶವಪೆಟ್ಟಿಗೆ ಕ್ರಿಸ್ತ ಶಕ 4ನೇ ಶತಮಾನಕ್ಕೆ ಸೇರಿದದ್ದಾಗಿರಬಹುದು. ಆ ಕಾಲದಲ್ಲಿ ಶವಪೆಟ್ಟಿಗೆಗಳನ್ನು ಮರುಬಳಕೆ ಮಾಡುವ ಪದ್ಧತಿ ಇದ್ದರೂ, ಇಂತಹ ವೈಶಿಷ್ಟ್ಯಪೂರ್ಣ ಪೆಟ್ಟಿಗೆಗಳನ್ನು ವಿಶೇಷ ವ್ಯಕ್ತಿಗಳ ಶವಸಂಸ್ಕಾರಕ್ಕೆ ಮಾತ್ರ ಬಳಸಲಾಗುತ್ತಿತ್ತೆನ್ನುತ್ತಾರೆ ತಜ್ಞರು.

ಮುಂದುವರೆದಿರುವ ಸಂಶೋಧನೆ: ಈ ಯುವತಿ ಯಾವ ವಯಸ್ಸಿನಲ್ಲಿ ಮೃತಪಟ್ಟಳು, ಸಾವಿಗೆ ಕಾರಣ ಏನು, ಆಕೆಯ ಸಾಮಾಜಿಕ ಹಿನ್ನೆಲೆ ಹೇಗಿತ್ತು ಎಂಬ ವಿಷಯಗಳ ಕುರಿತು ಪುರಾತತ್ತ್ವಜ್ಞರು ಈಗ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ. ಪತ್ತೆಯಾದ ವಸ್ತುಗಳು ರೋಮನ್‌ ಇತಿಹಾಸದ ಹೊಸ ಅಧ್ಯಾಯವನ್ನೇ ತೆರೆಯುವ ಸಾಧ್ಯತೆ ಇದೆ.ಬುಡಾಪೆಸ್ಟ್‌ನ ಈ ಪತ್ತೆ ಈಗ ಜಾಗತಿಕ ಸಂಶೋಧನಾ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

m

Related Posts