Featured, ಇತರೆ, ಸ್ಥಳೀಯ

ಸುಳ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಶೀಲನೆ: ಆಹಾರ ಇಲಾಖಾಧಿಕಾರಿಗಳಿಂದ ಮನೆಮನೆಗೆ ಭೇಟಿ

ಸುಳ್ಯ ನಗರ ವ್ಯಾಪ್ತಿಯ ಅನೇಕ ಕುಟುಂಬಗಳ ಬಿಪಿಎಲ್ ಕಾರ್ಡ್ ಅರ್ಹತೆ ಪರಿಶೀಲನೆಗಾಗಿ ಆಹಾರ ಇಲಾಖೆಯು ಸೂಚನೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಕುಟುಂಬಗಳ ದಾಖಲೆಗಳನ್ನು ಕಚೇರಿಗೆ ತರಲು ತಿಳಿಸಲಾಗಿತ್ತು. ಆದರೆ ಕೆಲ ಕುಟುಂಬಗಳು ಇಲಾಖೆಗೆ ಹಾಜರಾಗದೆ ಮಾಹಿತಿಯನ್ನು ಒದಗಿಸದಿದ್ದರಿಂದ, ಅಧಿಕಾರಿಗಳು ಮನೆಮನೆಗೆ ಭೇಟಿ ನೀಡುವ ಮೂಲಕ ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ.
ನವೆಂಬರ್ 26ರಂದು ಆಹಾರ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ವಸಂತಿ ಮತ್ತು ಶ್ರೀಮತಿ ಅನಿತಾ ಜಯನಗರ ವಾರ್ಡಿನ ಕೆಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಅಗತ್ಯವಿರುವ ದಾಖಲೆ ಪತ್ರಗಳು, ಆದಾಯ ಸಂಬಂಧಿತ ವಿವರಗಳು ಹಾಗೂ ಮನೆಯವರ ಆರ್ಥಿಕ ಸ್ಥಿತಿಯ ಕುರಿತು ಸ್ಥಳದಲ್ಲೇ ಮಾಹಿತಿ ಸಂಗ್ರಹಿಸಲಾಯಿತು.
ಅರ್ಹತೆ ದೃಢೀಕರಣ ಕಾರ್ಯ ನಗರದ ವಿವಿಧ ವಾರ್ಡುಗಳಲ್ಲಿ ಹಂತ ಹಂತವಾಗಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

Related Posts