ಬಹ್ರೈನ್ : ICF ಬಹ್ರೈನ್ ಇದರ ಆಶ್ರಯದಲ್ಲಿ ಆಯೋಜಿಸಲಾದ 13ನೇ ಇಸ್ಲಾಮಿಕ್ ಮದ್ರಸಾ ಕಲೋತ್ಸವ ಸ್ಪರ್ಧೆಯಲ್ಲಿ ಅನಿವಾಸಿ ಭಾರತೀಯ, ಮೂಲತಃ ಸುಳ್ಯ ತಾಲ್ಲೂಕಿನ ಇಂದ್ರಾಜೆ ನಿವಾಸಿ ಆಶ್ರಫ್ ಇಂದ್ರಾಜೆ ಹಾಗೂ ಅಮೀನಾ ಕೆ.ಎಂ. (ಜಟ್ಟಿಪಳ್ಳ) ದಂಪತಿ ಇವರ ಪುತ್ರ, ಜಟ್ಟಿಪಳ್ಳ ಮೂಸಾ ಕೆ ಎಂ ರವರ ಮೊಮ್ಮಗ, ಮಜ್ಮೌ ತಅಲೀಮಿಲ್ ಕುರಾನ್ ಮದ್ರಸಾ, ಹಮಾದ್ ಟೌನ್ ವಿದ್ಯಾರ್ಥಿ ಅಹ್ಮದ್ ಮಿಸ್ಬಹ್ ಇಂದ್ರಾಜೆ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಮಿಸ್ಬಹ್ ಅವರು ಕಲೋತ್ಸವದ ಜೂನಿಯರ್ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ,
ಮಲಯಾಳಂ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮದಹ್:ಹಾಡು ವಿಭಾಗದಲ್ಲೂ ದ್ವಿತೀಯ ಸ್ಥಾನ ಪಡೆದು ತಮ್ಮ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.
ಬಹ್ರೈನ್ ವ್ಯಾಪ್ತಿಯ ವಿವಿಧ ಮದ್ರಸಾಗಳಿಂದ ಅನೇಕ ವಿದ್ಯಾರ್ಥಿಗಳು ಈ ಕಲೋತ್ಸವದಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಭಾಷಾ ಸಾಮರ್ಥ್ಯ ಪ್ರದರ್ಶನಕ್ಕೆ ಪ್ರಸಕ್ತ ವೇದಿಕೆಯಾಯಿತು. ICF ಬಹ್ರೈನ್ ಈ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಆಯೋಜಿಸಿದ್ದು, ಸ್ಪರ್ಧೆಗಳು ಮಕ್ಕಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

