“ಫೈರ್ ಜಟ್ಟಿಪಳ್ಳ ತಂಡದ ಆಟಗಾರರು ಪರಸ್ಪರ ಹೊಂದಾಣಿಕೆಯಿಂದ ಬೆಂಕಿಯಾಟ ಆಡಬೇಕು. ನಮ್ಮೂರಿಗೆ ಪ್ರಶಸ್ತಿ ತಂದುಕೊಡುವಂತೆ ಶ್ರಮಿಸಲು ಎಲ್ಲರೂ ಬಲವಾದ ಪ್ರಯತ್ನ ಮಾಡಲಿ,” : ಪೆಲ್ತಡ್ಕ ರಾಮಚಂದ್ರ

ಸುಳ್ಯ: ಜಟ್ಟಿಪಳ್ಳ
ಗಾಂಧಿನಗರದ ಮುನಾಫರ್ ಮತ್ತು ಫೈಝಲ್ ಕಟ್ಟೆಕ್ಕಾರ್ ಅವರ ನೇತೃತ್ವದ ಫುಟ್‌ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್ ಆಶ್ರಯದಲ್ಲಿ ನಾಳೆ ಜರುಗಲಿರುವ ಅದ್ದೂರಿ ಡೇ–ನೈಟ್ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ – ಸೀಸನ್ 3 ಪಂದ್ಯ ಕೂಟದಲ್ಲಿ ಭಾಗವಹಿಸುವ ಫೈರ್ ಜಟ್ಟಿಪಳ್ಳ ತಂಡದ ಆಟಗಾರರ ಕ್ರೀಡಾ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಹರ್ಲಡ್ಕ ವಿಲ್ಲಾ ಆವರಣದಲ್ಲಿ ವರ್ಣರಂಜಿತವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮನಮೋಹಕ ಕ್ರೀಡಾ ಅಂಗಿಯನ್ನು ಬಿಡುಗಡೆ ಮಾಡಿದ ಪೆಲ್ತಡ್ಕ ರಾಮಚಂದ್ರ ಮಾತನಾಡಿ,
“ಫೈರ್ ಜಟ್ಟಿಪಳ್ಳ ತಂಡದ ಆಟಗಾರರು ಪರಸ್ಪರ ಹೊಂದಾಣಿಕೆಯಿಂದ ಬೆಂಕಿಯಾಟ ಆಡಬೇಕು. ನಮ್ಮೂರಿಗೆ ಪ್ರಶಸ್ತಿ ತಂದುಕೊಡುವಂತೆ ಶ್ರಮಿಸಲು ಎಲ್ಲರೂ ಬಲವಾದ ಪ್ರಯತ್ನ ಮಾಡಲಿ,” ಎಂದು ಉರಿದುಂಬಿಸಿ ತಂಡಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮೋಹಿದ್ದಿನ್ ಅಜ್ಮೀರಿಯ ಮತ್ತು ಫೈರ್ ಜಟ್ಟಿಪಳ್ಳ ತಂಡದ ವ್ಯವಸ್ಥಾಪಕ ಶಿಹಾಬ್ (ಚಿನ್ನು), ತಂಡದ ಆಟಗಾರ ತೇಜಸ್ ಗುತ್ತಿಗಾರು ಅವರಿಗೆ ಜೆರ್ಸಿ ಹಸ್ತಾಂತರಿಸಿದರು.


ಕಾರ್ಯಕ್ರಮದಲ್ಲಿ ರಶೀದ್ ಜಟ್ಟಿಪಳ್ಳ, ಶರೀಫ್ ಜಟ್ಟಿಪಳ್ಳ, ಮಹಮ್ಮದ್ ಬಿ.ಎಮ್, ಫೈಝಲ್ ಕಟ್ಟೆಕ್ಕಾರ್, ತಾಜುದ್ದೀನ್ ಎಂ. ಎಸ್., ಮುನಾಫರ್, ರಝಾಕ್ ಕೆ. ಎಂ., ಶೀಹಾಬ್ ಶಾ, ಫಾರೂಕ್ ಕೆ. ಎ., ಫಾರೂಕ್ ಆದರ್ಶ, ಸುಲೈಮಾನ್, ಇಮ್ರಾನ್ ಬಾರಿಕ್ಕಾಡ್, ಫೀರೋಜ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಾಜುದ್ದೀನ್ ಎಂ.ಎಸ್. ಸ್ವಾಗತಿಸಿ, ಮೋಹಿದ್ದಿನ್ ಅಜ್ಮೀರಿಯ ವಂದಿಸಿದರು



