ಮೇನಾಲ ಆಟೋ ಚಾಲಕ ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸದಸ್ಯರಾದ ಆಯುಷ್ಮಾನ್ ಜಯಂತ ಮೇನಾಲ ಮತ್ತು ಆಯುಷ್ಮಾತಿ ಸೌಮ್ಯ ದಂಪತಿಗಳ ಪುತ್ರ ತಕ್ಷಕ್ ರವರ ಪ್ರಥಮ ವರ್ಷದ ಹುಟ್ಟು ಹಬ್ಬದ ಸಲುವಾಗಿ ಮೇನಾಲ (ಜಾರತ್ತಡ್ಕ) ಅಂಗನವಾಡಿ ಕೇಂದ್ರಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಮತ್ತು ಮೇನಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಹಿ ತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ. ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆಯುಷ್ಮಾನ್ ಚಂದ್ರಶೇಖರ ಕೆ.ಪಲ್ಲತ್ತಡ್ಕ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಆಯುಷ್ಮಾನ್ ಹರೀಶ್ ಎಂ.ಎಸ್.ಮೇನಾಲ,AVSS ಸುಳ್ಯ ಶಾಖೆಯ ಉಪಾಧ್ಯಕ್ಷರಾದ ಆಯುಷ್ಮಾನ್ ಚೋಮ ಗಾಂಧಿನಗರ ಹಾಗೂ ಅಂಗನವಾಡಿ ಟೀಚರ್ ಆಯುಷ್ಮತಿ ದೇವಕಿ ಪಲ್ಲತ್ತಡ್ಕ,ಅಂಗನವಾಡಿ ಸಹಾಯಕಿ ಹಾಗೂ ಮೇನಾಲ ಶಾಲೆಯ ಮುಖ್ಯೋಪಾಧ್ಯಾಯರಾದ ಆಯುಷ್ಮತಿ ಕನಕ ಮೇಡಂ,ಆಯುಷ್ಮತಿ ಲತಾ ಮೇಡಂ,ಕು.ಚೈತ್ರ ಪಲ್ಲತ್ತಡ್ಕ ಉಪಸ್ಥಿತರಿದ್ದರು.






m
