ಇತರೆ, ಸ್ಥಳೀಯ

ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಟಿ. ಎಂ. ಶಹೀದ್ ಅವರಿಗೆ ಸುಳ್ಯದಲ್ಲಿ ಅಭಿನಂದನೆ

ಸುಳ್ಯ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪುತ್ತೂರಿನಲ್ಲಿ ನಡೆದ ಬ್ಯಾರಿ “ಚಮ್ಮನ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಗೌರವ ಪ್ರಶಸ್ತಿಗೆ ಭಾಜನರಾದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಅವರಿಗೆ ಸುಳ್ಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದಅಭಿನಂದಿಸಲಾಯಿತು

ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಕೆ. ಎಂ. ಮುಸ್ತಫ ಅವರು ಎಲ್ಲರ ಪರವಾಗಿ ಟಿ. ಎಂ. ಶಹೀದ್ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ. ಇಬ್ರಾಹಿಂ, ಕನಕ ಮಜಲು ಸುಣ್ಣಮೂಲೆ ಜುಮ್ಮಾ ಮಸ್ಜಿದ್ ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ, ಈ ವಾರ್ತೆ ಸಂಪಾದಕ ರಶೀದ್ ಜಟ್ಟಿಪ್ಪಳ್ಳ ಉಪಸ್ಥಿತರಿದ್ದರು.

Related Posts