Featured, ಇತರೆ, ಸ್ಥಳೀಯ

ಅಲ್ ಇಖ್ವಾನ್ ಕಬರ್ ಸಮಿತಿಯಿಂದ ಖಾದರ್ ಜಟ್ಟಿಪಳ್ಳ ರವರಿಗೆ ಬಿಳ್ಕೊಡುಗೆ

ಪವಿತ್ರ ಉಮ್ರಾ ಹಾಗೂ ಝಿಯಾರತ್ ನೆರವೇರಿಸಲು ಮಕ್ಕಾ ಮತ್ತು ಮದಿನಾಕ್ಕೆ ತೆರಳಲಿರುವ ಜಟ್ಟಿಪಳ್ಳ ನಿವಾಸಿ ಖಾದರ್ ಜಟ್ಟಿಪಳ್ಳ ಅವರಿಗೆ ಅಲ್ ಇಖ್ವಾನ್ ಕಬರ್ ಸಮಿತಿ ವತಿಯಿಂದ ಬಿಳ್ಕೊಡುಗೆ ಸಮಾರಂಭವನ್ನು ಡಿ.11ರಂದು ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನೆರವೇರಿತು

ಸಮಾರಂಭದಲ್ಲಿ ಗಾಂಧಿನಗರ ಮದರಸದ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ದುವಾಶಿರ್ವಚನ ನೀಡಿ, ಖಾದರ್ ಜಟ್ಟಿಪಳ್ಳ ಅವರ ಪವಿತ್ರ ಯಾತ್ರೆ ಸುಗಮವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ವಹಿಸಿದ್ದರು.
ಜಮಾಅತ್ ಕಮಿಟಿಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಮಾತನಾಡಿ, ಉಮ್ರಾ ಯಾತ್ರೆಯ ಮಹತ್ವವನ್ನು ವಿವರಿಸಿ ಯಾತ್ರಾರ್ಥಿಗೆ ಶುಭಾಶಯಗಳನ್ನು ಕೋರಿದರು.
ಅಲ್ ಇಖ್ವಾನ್ ಸಮಿತಿ ಸದಸ್ಯರಾದ ಶಾಲಿ ಕಟ್ಟೆಕ್ಕಾರ್, ಮುಸ್ತಫಾ ಕಲ್ಲಪಳ್ಳಿ, ಸಮೀರ್ ಮೊಬೈಲ್ ಹಾರ್ಟ್, ಕೆ.ಎಂ. ಅತ್ತಾವುಲ್ಲಾ ಮಲ್ನಾಡ್, ಸಮದ್ ಹಾಜಿ ಕಲ್ಲಪಳ್ಳಿ, ಕಯ್ಯುಮ್ ಕಟ್ಟೆಕ್ಕಾರ್, ನಾಸೀರ್ ಕಮ್ಮಾಡಿ, ಕಲಂದರ್ ನಾವೂರ್, ನಜೀರ್ ಸುಪ್ರೀಂ, ರಜ್ಜುಭಯ್ಯಾ, ಯಾಕುಬ್ ಹಾಜಿ ಎಸ್.ಟಿ., ಶಫಿಕ್ ಗಾಂಧಿನಗರ, ಶಹೀದ್ ಪಾರೆ, ರಹೀಮ್ ಕಲ್ಲಪಳ್ಳಿ ಹಾಗೂ ಖಾದರ್ ಜಟ್ಟಿಪಳ್ಳ ಅವರ ಪುತ್ರ ಶರೀಫ್ ಜಟ್ಟಿಪಳ್ಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

 

Related Posts