ಇತರೆ, ರಾಜಕೀಯ, ಸ್ಥಳೀಯ

ಕೇರಳ ಸ್ಥಳೀಯಾಡಳಿತ ಚುನಾವಣೆ: ಆಡಳಿತಾರೂಢ ಎಲ್.ಡಿ.ಎಫ್‌ಗೆ ತೀವ್ರ ಹಿನ್ನಡೆ

ಎಲ್.ಡಿ.ಎಫ್‌ಗೆ (LDF) ಅಪ್ಪಳಿಸಿದ ಯು.ಡಿ.ಎಫ್ (UDF) – ಭರ್ಜರಿ ಮುನ್ನಡೆ : ಎನ್.ಡಿ.ಎ(NDA) ಗೆ ಸಿಗದ ಅಚ್ಚೇದೀನ್

ತಿರುವನಂತಪುರಂ: ಕೇರಳದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಎಲ್.ಡಿ.ಎಫ್ (LDF) ಮೈತ್ರಿಗೆ ತೀವ್ರ ಹಿನ್ನಡೆ ಎದುರಾಗಿದ್ದು, ಪ್ರಮುಖ ಪಂಚಾಯತ್‌ಗಳು, ನಗರಸಭೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ಯು.ಡಿ.ಎಫ್ (UDF) ಗಮನಾರ್ಹ ಮುನ್ನಡೆ ಸಾಧಿಸಿದೆ.

ಜನಸಾಮಾನ್ಯರ ಅಸಮಾಧಾನ, ಅಭಿವೃದ್ಧಿ ಯೋಜನೆಗಳ ಜಾರಿಯಲ್ಲಿನ ವಿಳಂಬ ಹಾಗೂ ಆಡಳಿತ ವೈಫಲ್ಯವೇ ಎಲ್.ಡಿ.ಎಫ್‌ಗೆ ಹಿನ್ನಡೆಯ ಪ್ರಮುಖ ಕಾರಣವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಡಳಿತ ವಿರೋಧಿ ಅಲೆ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಇತ್ತ ದೊಡ್ಡ ಮಟ್ಟದಲ್ಲಿ ಚುನಾವಣೆಗೆ ಇಳಿದ ಎನ್.ಡಿ.ಎ (NDA) ಮೈತ್ರಿಗೆ ಕೆಲವೆಡೆ ಸಣ್ಣ ಮಟ್ಟದ ಪ್ರಗತಿ ಕಂಡುಬಂದರೂ, ಒಟ್ಟಾರೆ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯಲಿಲ್ಲ. ನಗರ ಪ್ರದೇಶಗಳಲ್ಲಿಯೂ ಎನ್.ಡಿ.ಎ ಸ್ಪಷ್ಟ ಪ್ರಭಾವ ಬೀರುವಲ್ಲಿ ವಿಫಲವಾಗಿದೆ.

ಈ ಚುನಾವಣಾ ಫಲಿತಾಂಶಗಳು ರಾಜ್ಯ ರಾಜಕಾರಣದಲ್ಲಿ ಮಹತ್ವದ ಸಂದೇಶ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಆಡಳಿತಾರೂಢ ಎಲ್.ಡಿ.ಎಫ್‌ಗೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ. ಇತ್ತ ಯು.ಡಿ.ಎಫ್ ಫಲಿತಾಂಶಗಳಿಂದ ಉತ್ಸಾಹಗೊಂಡಿದ್ದು, ಭವಿಷ್ಯದ ರಾಜಕೀಯ ಸಮೀಕರಣಗಳಿಗೆ ಇದು ದಿಕ್ಕು ತೋರಲಿದೆ.

Related Posts