ಕೊಂಡೆ ಮೂಲ ಎರಡನೇ ವಾರ್ಡ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಕುಶಲ್ ಕುಮಾರ್ ಆಪ್ ನಿಂದ ಸ್ಪರ್ಧೆ

ಕಿನ್ನಿಗೋಳಿ: ಡಿಸೆಂಬರ್ 21ರಂದು ನಡೆಯಲಿರುವ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಆಪ್) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೊಂಡೆ ಮೂಲ ಎರಡನೇ ವಾರ್ಡ್‌ನಿಂದ ಸಾಮಾಜಿಕ ಹಾಗೂ RTI ಕಾರ್ಯಕರ್ತರಾದ ಕುಶಲ್ ಕುಮಾರ್ ಅವರು ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಕುಶಲ್ ಕುಮಾರ್ ಅವರು ಸ್ಥಳೀಯ ಮಟ್ಟದಲ್ಲಿ ಹಲವು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿದವರು. ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿರುವ ಅವರು, ಜನಪರ ಹೋರಾಟಗಳ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲೇ ಈ ಬಾರಿ ರಾಷ್ಟ್ರೀಯ ಪಕ್ಷವಾದ ಆಮ್ ಆದ್ಮಿ ಪಕ್ಷದಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯ ಪ್ರವೇಶ ಮಾಡಿದ್ದಾರೆ
ಇಂದು ಕಿನ್ನಿಗೋಳಿಯ ಕೊಂಡೆ ಮೂಲ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿ ಕುಶಲ್ ಕುಮಾರ್ ಪರವಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಬಿರುಸಿನ ಚುನಾವಣಾ ಪ್ರಚಾರ ನಡೆಯಿತು. ಮನೆಮನೆ ಭೇಟಿ, ಜನಸಂಪರ್ಕ ನಡೆ ಮೂಲಕ ಪಕ್ಷದ ಆಶಯಗಳು ಮತ್ತು ಅಭ್ಯರ್ಥಿಯ ಜನಪರ ಕಾರ್ಯಗಳ ಕುರಿತು ಮತದಾರರಿಗೆ ಮಾಹಿತಿ ನೀಡಲಾಯಿತು.


