ಕಲಿಕೆಯಲ್ಲಿ ಕೌಶಲ್ಯಾಭಿವೃದ್ದಿಗೆ ಡಿಜಿಟಲ್ ಕ್ಲಾಸ್ ರೂಮ್ ಅವಶ್ಯಕ : ಮೂಸಬ್ಬ. ಪಿ. ಬ್ಯಾರಿ
ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ( ಮೀಫ್ ) ಕೇಂದ್ರ ಸಮಿತಿ ಮೂಲಕ ಆನಿವಾಸಿ ಉದ್ಯಮಿ ಎಸ್. ಎಂ. ಮುಸ್ತಫ ಭಾರತ್ ರವರು ಕೊಡುಗೆಯಾಗಿ ನೀಡಿದ ರೂ 1.25 ಲಕ್ಷ ಮೌಲ್ಯದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ. ವಿ ಯನ್ನು ಮೀಫ್ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿಯವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಡಿಜಿಟಲ್ ಯುಗ ದಲ್ಲಿ ವಿದ್ಯಾರ್ಥಿ ಗಳ ಕೌಶಲ್ಯ ಪೂರ್ಣ ಕಲಿಕೆಗೆ ವಿದ್ಯುನ್ಮಾ ನ ಮಾಧ್ಯಮ ಸಹಕಾರಿ ಎಂದರು
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು ಈ ಸಂದರ್ಭದಲ್ಲಿ ಮೀಫ್ ಉಪಾಧ್ಯಕ್ಷ, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಮೀಫ್ ಪದಾಧಿಕಾರಿಗಳಾದ ಅನ್ವರ್ ಹುಸೈನ್ ಗೂಡಿನಬಳಿ, ಅಝೀಝ್ ಅಂಬರ್ ವ್ಯಾಲಿ, ಗ್ರೀನ್ ವ್ಯೂ ಪದಾಧಿಕಾರಿಗಳಾದ ಉಮ್ಮರ್ ಕೆ. ಎಸ್, ಶಾಫಿ ಕುತ್ತಾಮೊಟ್ಟೆ, ಪೂರ್ವಧ್ಯಕ್ಷ ಪಿ. ಎ. ಮಹಮ್ಮದ್, ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿ ಪಟ್ಟಣ ಮೊದಲಾದವರು ವೇದಿಕೆಯಲ್ಲಿದ್ದರು

