Featured, ಅಂಕಣ, ಸ್ಥಳೀಯ

ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಬೇಡಿಕೆಗಳ ಮನವಿ ಸಲ್ಲಿಸಿದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ

ಸುಳ್ಯ ನಗರಪಂಚಾಯತ್ ಗೆ ಮಾಸಿಕ ಸಭೆ ನಡೆಸಲು ಆಗಮಿಸಿದ ಆಡಳಿತಾಧಿಕಾರಿಯಾದ ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರನ್ನು ಭೇಟಿ ಮಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಕೆಲವು ಪ್ರಚಲಿತ ಸಮಸ್ಯೆ ಗಳ ಬಗ್ಗೆ ಚರ್ಚಿಸಿದರು 

ಅಮೃತ 2.0 ಯೋಜನೆಯಡಿ ಪೈಪ್ ಲೈನ್ ಗೆ ಅಗೆದ ರಸ್ತೆಯನ್ನು ಸರಿಪಡಿಸುವಂತೆ ಸಂಬಂಧ ಪಟ್ಟವರಿಗೆ ಸೂಚಿಸುವುದು, ಸುಳ್ಯ ನಗರದ ಎಲ್ಲಾ ಬಸ್ ಪ್ರಯಾಣಿಕರ ತಂಗುದಾಣ ವನ್ನು ಏಕ ರೂಪ ಆಧುನಿಕ ವಿನ್ಯಾಸ ದೊಂದಿಗೆ ವಿವಿಧ ಸ್ವಾಮ್ಯ ಗಳ ಕಂಪನಿ ಗಳ ಪ್ರಚಾರ ಫಲಕ ಅಳವಡಿಸಿ ದಲ್ಲಿ ಆದಾಯವು ಹೆಚ್ಚುತ್ತದೆ ನಗರ ಸುಂದರೀ ಕರಣ ವಾಗುತ್ತದೆ ಅಲ್ಲದೇ ತಾಲೂಕು ಕಚೇರಿ ಬಳಿ, ಸರ್ಕಾರಿ ಆಸ್ಪತ್ರೆ ಬಳಿ, ಎ ಪಿ ಎಂ ಸಿ ರಸ್ತೆ ಯಲ್ಲಿರುವ ಸಾರ್ವಜನಿಕ ಶೌಚಾಲಯ ಗಳಿಗೆ ಸ್ವಚ್ಛತಾ ಸಿಬ್ಬಂದಿ ಯನ್ನು ನೇಮಿಸಿ ಸಾರ್ವಜನಿಕ ಸಮರ್ಪಕ ಬಳಕೆಗೆ ಒದಗಿಸುವುದು, ಸುಸಜ್ಜಿತ ಆಧುನಿಕ ಸೌಕರ್ಯ ಗಳನ್ನು ಒಳಗೊಂಡ ಪುರಭವನ ನಿರ್ಮಾಣ ಕ್ಕೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ ( ಕೆ ಯು ಐ ಡಿ ಎಫ್ ಸಿ) ಪ್ರಸ್ತಾವನೆ ಸಲ್ಲಿಸುವುದು, ಮುಖ್ಯ ರಸ್ತೆ ಯ ಸ್ಲಾಬ್ ಗಳಿಗೆ ಕರ್ಬ್ ಸ್ಟೋನ್ ಅಳವಡಿಸಿ ಸ್ಲಾಬ್ ಗಳನ್ನು ಹಾಕಿ ಸಾರ್ವಜನಿಕ ರಿಗೆ ನಡೆದಾಡಲು ಅನುಕೂಲ ಮಾಡಿ ಕೊಡುವುದು, ಜಯನಗರ ವಾರ್ಡ್ ನಲ್ಲಿ ರಸ್ತೆ ತೀರಾ ನಾ ದುರಸ್ಥಿಯಲ್ಲಿದ್ದು ಇಂಟರ್ಲಾಕ್ ಅಳವಡಿಕೆಗೆ ಮೀಸಲಿರಿಸಿದ ಕಾಮಗಾರಿಯನ್ನು ಬದಲಾಯಿಸಿ ರಸ್ತೆ ದುರಸ್ಥಿ ಮಾಡುವುದು ಮೊದಲಾದ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತುಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾ ಧಿಕಾರಿಯವರು ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳುವಂತೆ ಸೂಚಿಸಿದರು, ಮುಖ್ಯಾಧಿಕಾರಿ ಬಸವರಾಜ್ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Related Posts