Featured, ಸ್ಥಳೀಯ

ಶ್ರೀರಾಮಪೇಟೆ: ಅವ್ಯವಸ್ಥಿತ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ, ತಾಯಿ ಮಗು ಬಿದ್ದು ಗಾಯ;

ಡಿ.29 ಸುಳ್ಯ; ಶ್ರೀರಾಮ ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಪೈಪ್ ಲೈನ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದ್ದು, ಅವ್ಯವಸ್ಥಿತ ಕಾಮಗಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ , ಮಹಿಳೆ ಮತ್ತು ಮಗು ಫುಟ್ ಪಾತ್ ಮೇಲೆ ಬಿದ್ದು ಗಾಯಗೊಂಡ ಘಟನೆ ಈ ದಿನ ನಡೆದಿದೆ.

ಮಹಿಳೆಯೊಬ್ಬರು ತಮ್ಮ ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಈ ಒಂದು ಘಟನೆ ಉಂಟಾಗಿದೆ‌. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವ್ಯವಸ್ಥಿತ ಕಾಮಗಾರಿ ಮತ್ತು ಗುತ್ತಿಗೆದಾರರ ಅಜಾಗರೂಕತೆ, ಜನರ ಗಂಭೀರ ಟೀಕೆಗೆ ಕಾರಣವಾಗಿದೆ. ಮಾತ್ರವಲ್ಲದೆ ಗುತ್ತಿಗೆದಾರರನ ನಿರ್ಲಕ್ಷ್ಯತೆ ವಿರುದ್ದ ದೂರುದಾಖಲಿಸಲು ಸಾರ್ವಜನಿಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಫುಟ್ ಪಾತ್ ಮೇಲೆಯೇ ಕಲ್ಲುಮಣ್ಣುಗಳು ಹಾಕಲಾಗಿದೆ. ಯಾವುದೇ ಎಚ್ಚರಿಗೆ ಫಲಕಗಳನ್ನು ಅಳವಡಿಸಲಾಗಲಿಲ್ಲ. ರಸ್ತೆಯ ಸ್ಥಿತಿಯೂ ಶೋಚನೀಯವಾಗಿದ್ದು, ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುವುದಾಗಿಯೂ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಂಬಂಧಪಟ್ಟವರು ತಮ್ಮ ನಿರ್ಲಕ್ಷ್ಯತನವನ್ನು ಸರಿಪಡಿಸಿ ಅಗತ್ಯ ಕ್ರಮವಹಿಸಲಿ ಎಂಬುದೇ ನಮ್ಮ ಆಶಯ!

 

Related Posts