ಸುಳ್ಯ
ವಿದ್ಯಾರ್ಥಿ ಬದುಕಿನ ಮಹತ್ವದ ತಿರುವಾದ ಎಸ್‌ಎಸ್‌ಎಲ್‌ಸಿ ನಂತರದ ಶೈಕ್ಷಣಿಕ ದಿಕ್ಕುಗಳಿಗೆ ಸ್ಪಷ್ಟತೆ ನೀಡುವ ಉದ್ದೇಶದಿಂದ ಎನ್‌ಲೈಟ್ ಎಜುಕೇಶನಲ್ ಸರ್ವಿಸಸ್ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ENVISION’26 ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಅನ್ಸಾರಿಯಾ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಉಸ್ತಾದ್ ಅವರ ಹೃದಯಸ್ಪರ್ಶಿ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಾಜ್ಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶಶಿಧರ್ ಎಂ.ಜೆ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳ ಕನಸುಗಳಿಗೆ ಶ್ರಮವೇ ಸೇತುವೆ ಎಂಬ ಸಂದೇಶವನ್ನು ನೀಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳ ಮೂಲಕ ಶೈಕ್ಷಣಿಕ ಆಯ್ಕೆಗಳ ಮಹತ್ವವನ್ನು ವಿವರಿಸಿ ಮಾರ್ಗದರ್ಶನ ನೀಡಿದರು. ಹಫೀಝ್ ಪಿ.ಅರ್ ಅವರು ನೀಟ್ (NEET) ಪರೀಕ್ಷೆಯ ಸವಾಲುಗಳು ಮತ್ತು ಅವಕಾಶಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು nLight ಅಧ್ಯಕ್ಷ ಅಬ್ದುಲ್ ಮುಜೀಬ್ ಕೆ.ಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನದ ಸ್ಥಾಪಕ ಉಮ್ಮರ್ ಬೀಜದಕಟ್ಟೆ ಹಾಗೂ ಸಮಾಜಸೇವಕ ಮುಹಮ್ಮದ್ ಪಿ.ಎ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜೆ.ಎಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಹಾಜಿ ಎಸ್.ಎ ಹಮೀದ್, ಶಿಕ್ಷಣಪ್ರೇಮಿ ಹಾಜಿ ಮೊಯಿದೀನ್ ಫ್ಯಾನ್ಸಿ, ಹಾಜಿ ಎಸ್.ಎಂ ಹಮೀದ್, ಗಾಂಧಿನಗರ ಜಮಾತ್ ಅಧ್ಯಕ್ಷ ಹಾಜಿ ಮುಹಮ್ಮದ್ ಕೆ.ಎಂ.ಎಸ್, ಹಾಜಿ ಹಮೀದ್ ಜೆ.ಎಸ್, ರಫೀಕ್ ಐವತೊಕ್ಲು, ಬಶೀರ್ ಬೆಳ್ಳಾರೆ, ಉಸ್ಮಾನ್ ಮೊಗರ್ಪಣೆ, ಫೈಝಲ್ ಕಟ್ಟೆಕ್ಕಾರ್, ಸಿದ್ದೀಕ್ ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಾಗಾರದಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

nLight ಪ್ರ. ಕಾರ್ಯದರ್ಶಿ ಆಶಿಕ್ ಸುಳ್ಯ, ಕೋಶಾಧಿಕಾರಿ ಶಂಸುದ್ದೀನ್ ಕೆ.ಬಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಹೀದ್ ಪಾರೆ, ಮಸೂದ್ ಮಚ್ಚು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಕಮಾಲ್ ಎ.ಬಿ ಸ್ವಾಗತಿಸಿ, ಆಸಿಫ್ ಪನ್ನೆ ವಂದಿಸಿದರು. ನಿಜಾರ್ ಅವರು ಕಾರ್ಯಕ್ರಮವನ್ನು ಸುಗಮವಾಗಿ ನಿರೂಪಿಸಿದರು. 
ವಿದ್ಯಾರ್ಥಿಗಳ ಕನಸುಗಳಿಗೆ ಬೆಳಕು ತುಂಬುವ ಆಶಯದೊಂದಿಗೆ ENVISION’26 ಕಾರ್ಯಾಗಾರ ಅತ್ಯಂತ ಯಶಸ್ಸು ಕಂಡಿತು.


