Featured, ಅಂಕಣ, ಸ್ಥಳೀಯ

ಗೂನಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಗೂನಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಮಸೀದಿಯ ವಠಾರದಲ್ಲಿ ಜರುಗಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು “ನಮ್ಮ ದೇಶದ ಸಂವಿಧಾನವು ಬೇರೆಲ್ಲ ದೇಶಗಳಿಗೆ ಮಾದರಿಯಾಗಿದೆ, ಮುಸಲ್ಮಾನ, ದಲಿತ ವ್ಯಕ್ತಿ ಈ ದೇಶದ ರಾಷ್ಟ್ರಪತಿ ಆಗಬಹುದಾದರೆ ಅದಕ್ಕೆ ಕಾರಣ ಸಂವಿಧಾನ, ಅಂತಹ ಸಂವಿಧಾನವನ್ನು ಉಳಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ” ಎಂದವರು ಹೇಳಿದರು. ಜಮಾಅತ್ ಖತೀಬರಾದ ಬಹು.ಅಬ್ದುಲ್ ರೆಹಮಾನ್ ಸಖಾಫಿಯವರು ಮಾತನಾಡಿ “ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ, ಸಂವಿಧಾನದ ತತ್ವದ ಮೂಲಕ ದೇಶದ ಏಕತೆಯನ್ನು ಕಾಪಾಡಬೇಕೆಂದು” ಅವರು ಕರೆ ನೀಡಿದರು. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರು ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಜಮಾಅತಿನ ಸದರ್ ಮುಅಲ್ಲಿಂ ಬಹು.ಸವಾದ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಜಮಾಅತ್ ಸಮಿತಿಯ ಕೋಶಾಧಿಕಾರಿ ಡಿ.ಆರ್.ಅಬ್ದುಲ್ ಖಾದರ್, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷರಾದ ಜಿ.ಎಂ.ಅಬ್ದುಲ್ಲ, ಎಸ್.ವೈ.ಎಸ್.ಗೂನಡ್ಕ ಯುನಿಟ್ ಅಧ್ಯಕ್ಷರಾದ ಮುನೀರ್ ಗೂನಡ್ಕ, ಎಸ್.ಎಸ್.ಎಫ್.ಗೂನಡ್ಕ ಯುನಿಟ್ ಅಧ್ಯಕ್ಷರಾದ ಉನೈಸ್ ಗೂನಡ್ಕ ಸೇರಿದಂತೆ ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು.

Related Posts