ವಿದೇಶದಲ್ಲಿದ್ದರೂ ತಮ್ಮ ನಾಡಿನ ಸಂಸ್ಕೃತಿ, ಸ್ನೇಹ ಮತ್ತು ಒಗ್ಗಟ್ಟನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದ ಸ್ಥಾಪಿತವಾದ ಸುರಿಬೈಲಿಯನ್ಸ್ ಕೂಟಾಯಿಮ (UAE) ಸಂಸ್ಥೆಯ 5ನೇ ವರ್ಷದ ಸ್ನೇಹ ಕೂಟಾಯಿಮ ಕಾರ್ಯಕ್ರಮದ ಅಂಗವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷರಾದ ಅಬೂಬಕ್ಕರ್ ಕೊಪ್ಪಳ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಮೀದ್ ಕುಲ್ಯಾರ್,ಕನ್ವೀನರ್ ಆಗಿ ಹನೀಫ್ ಖಂಡಿಗ,ಮತ್ತು ಟ್ರೆಷರರ್ ಆಗಿ ಹನೀಫ್ ಅಶ್ಅರಿಯ ನಗರ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಫೆಬ್ರವರಿ 8ರಂದು ಮಧ್ಯಾಹ್ನ 2 ಗಂಟೆಗೆ ದುಬೈಯ ಮುಶ್ರಿಫ್ ಪಾರ್ಕ್‌ನಲ್ಲಿ 5ನೇ ವರ್ಷದ ಸ್ನೇಹ ಕೂಟಾಯಿಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾಕೂಟಗಳು, ಮನರಂಜನಾ ಸ್ಪರ್ಧೆಗಳು ಹಾಗೂ BBQ ನೈಟ್ & ಕಾಂಪಿಟಿಷನ್ಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸುವವರಿಗೆ ಸಾಂಸ್ಕೃತಿಕ ಹಾಗೂ ಸ್ನೇಹಪೂರ್ಣ ಅನುಭವವನ್ನು ನೀಡಲಿದೆ.

ಈ ಕಾರ್ಯಕ್ರಮದ ಯಶಸ್ಸಿಗಾಗಿ ಸುರಿಬೈಲ್ ಪ್ರದೇಶದ ಎಲ್ಲಾ ಬಂಧುಬಾಂಧವರು ಕುಟುಂಬ ಸಮೇತವಾಗಿ ಭಾಗವಹಿಸಬೇಕೆಂದು ಸುರಿಬೈಲಿಯನ್ಸ್ ಕೂಟಾಯಿಮ ಸಮಿತಿ ಪ್ರೀತಿಪೂರ್ವಕವಾಗಿ ಆಹ್ವಾನಿಸಿದೆ.
