ಸುಳ್ಯ: ಸುಳ್ಯ ಬಾಳಮಕ್ಕಿ ನಿವಾಸಿ ಯಾಗಿದ್ದ ಸದ್ರಿ ಗಾಂಧಿನಗರ ಬೀಜಕ್ಕೊಚ್ಚಿ ಪ್ರದೇಶದಲ್ಲಿರುವ ‘ಸುಳ್ಯ ಮೊಬೈಲ್ ಗ್ಯಾರೇಜ್’ ಮಾಲಕರಾದ ರಹೀಂ ಬಾಳಮಕ್ಕಿ ಅವರ ತಂದೆ ಕೆ. ಇ. ಮುಹಮ್ಮದ್ ಬಾಳಮಕ್ಕಿ (68) ಅವರು ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ಅಯಿಷಾ ಪುತ್ರರಾದ ರಹೀಂ ಬಾಳಮಕ್ಕಿ (ಸುಳ್ಯ ಮೊಬೈಲ್ ಗ್ಯಾರೇಜ್ ಮಾಲಕರು), ರಫೀಕ್ ಬಾಳಮಕ್ಕಿ, ಹಸೈನಾರ್ ಹಾಗೂ ಪುತ್ರಿಯರಾದ ಸಾಜಿದಾ, ಸುನೈನಾ, ಸುಮಯ್ಯ ಅವರನ್ನು ಸೇರಿದಂತೆ ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


