₹25 ಲಕ್ಷ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ – ರಾಜಕೀಯ ಬಿಟ್ಟು ಗ್ರಾಮಾಭಿವೃದ್ಧಿಗೆ ಒತ್ತು: ಶಾಸಕಿ ಭಾಗೀರಥಿ ಮುರುಳ್ಯ
ರಾಮಕುಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ,ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿಪೂಜೆಯನ್ನು ಫೆಬ್ರವರಿ 11 ರಂದು ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ರಾಮಕುಂಜ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರವನ್ನು ನೀಡುವ ಕಾರ್ಯಕ್ರಮ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಾಗಿದೆ.
ಐದು ವರ್ಷದ ಅವಧಿಯಲ್ಲಿ ಗ್ರಾಮ ಪಂಚಾಯಿತಿನಲ್ಲಿ ಬಹಳಷ್ಟು ಕಾಮಗಾರಿಗಳು ಆಗಿವೆ. ನಿವೇಶನ ಇಲ್ಲದವರಿಗೆ ನಿವೇಶನ ಕೊಡಿಸಬೇಕು ಎನ್ನುವ ನಿಟ್ಟಿನಲ್ಲಿ ಬಹಳ ವರ್ಷಗಳಿಂದ ಪ್ರಯತ್ನ ಪಟ್ಟು ಆಗದ ಕೆಲಸವನ್ನು ಈ ವರ್ಷದ ಅವಧಿಯ ಪಂಚಾಯತಿನ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಒಂದು ಮುತ್ತುವರ್ಜಿಯಿಂದ ಇವತ್ತು ಅದನ್ನು ಕೊಡಿಸುವಂತ ಒಂದು ಸೌಭಾಗ್ಯ ಸಿಕ್ಕಿದೆ.

ಹಕ್ಕು ಪತ್ರ ಸಿಗುವಂತಹ ಒಂದು ಅವಕಾಶ ಆಗಿದೆ. ಅದಕ್ಕೆ ನೀವು ಭಾಗ್ಯವಂತರು. ಈ ಸಂದರ್ಭದಲ್ಲಿ ಹಕ್ಕು ಪತ್ರ ಮನೆ ಅವನ ಮನೆ ಇದ್ದರೂ ಕೂಡ ಹಕ್ಕು ಪತ್ರ ಕೊಡಲಿಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ನಾವಿರುವಾಗ, ನಿಮಗೆ ಇದನ್ನು ದೊರಕಿಸಿಕೊಟ್ಟಂತಹ ಗ್ರಾಮ ಪಂಚಾಯಿತಿನ ಸಿಬ್ಬಂದಿಗಳು ಮತ್ತು ಇಓ ಅವರು ತಾಲೂಕ್ ಪಂಚಾಯತಿನ ಇಓ ಕೂಡ ಮತ್ತೆ ತಹಸೀಲ್ದಾರ್ ಅವರ ಇಲಾಖೆಯವರು ಕೂಡ ಇದಕ್ಕೆ ಶ್ರಮವನ್ನು ವಹಿಸಿದ್ದಾರೆ.
ಈ ಗ್ರಾಮ ಪಂಚಾಯತಿನ ಐದು ವರ್ಷದ ಅವಧಿಯಲ್ಲಿ ಒಳ್ಳೆಯ ಆಡಳಿತವನ್ನು ಮಾಡಿದ್ದಾರೆ. ಯಾವುದೇ ಒಂದು ಗ್ರಾಮ ಅಭಿವೃದ್ಧಿ ಆಗಬೇಕಿದ್ರೆ, ಅಲ್ಲಿ ರಾಜಕೀಯ ಇರಬಾರದು. ಅಲ್ಲಿ ರಾಜಕೀಯ ಮಾಡಿದರೆ ಆ ಗ್ರಾಮ ಅಭಿವೃದ್ಧಿ ಆಗಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ರಾಜಕೀಯವನ್ನು ಬಿಟ್ಟು ನಾವೆಲ್ಲರೂ ಒಟ್ಟಾಗಿ ನಮ್ಮ ಗ್ರಾಮ ಅಭಿವೃದ್ಧಿ ಆಗಬೇಕು.

ಒಳ್ಳೆಯ ಕೆಲಸವನ್ನು ಈ ಪಂಚಾಯಿತಿನಲ್ಲಿ ಪಂಚಾಯಿತಿ ಸದಸ್ಯರಿಗೆ ಅಧಿಕಾರಿಗಳಿಗೆ ಸಾತ್ ಕೊಟ್ಟು ಗ್ರಾಮಸ್ಥರು ಕೂಡ ಕೆಲಸ ಮಾಡಿದ ಕಾರಣ ಇವತ್ತು ಇಷ್ಟು ಅಭಿವೃದ್ಧಿಯನ್ನು ಹೊಂದಲಿಕ್ಕೆ ಸಾಧ್ಯ ಆಗಿದೆ.
ಒಟ್ಟು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮುಂದೆ ಕೂಡ ಚಿಂತನೆ ಮಾಡಿಕೊಂಡು ಕೆಲಸವನ್ನು ಮಾಡುವ ಅಂತ ಹೇಳುತ್ತಾ ಈಗಾಗಲೇ ನಾನು ಈ ಭಾಗದ ನನ್ನ ಅನುದಾನದಲ್ಲಿ 25 ಲಕ್ಷ ಅನುದಾನ ರಸ್ತೆಗಿಟ್ಟು ಇವತ್ತು ಗುದ್ದಲಿ ಪೂಜೆಯನ್ನು ಮಾಡಿದ್ದೇನೆ.
ಇನ್ನು ಬರುವಂತ ದಿನದಲ್ಲಿ ಕೂಡ ನಿಮ್ಮ ಬೇಡಿಕೆಗಳಿಗೆ ಎಲ್ಲವನ್ನು ಮಾಡಲಿಕ್ಕೆ ಸಾಧ್ಯವಿಲ್ಲ. ಸರಕಾರದಿಂದ ಬಂದ ಅನುದಾನವನ್ನು ಎಲ್ಲಾ ಗ್ರಾಮಗಳಿಗೆ ಹಂಚಿಕೆ ಮಾಡುವಾಗ ಒಂದಷ್ಟು ಗ್ರಾಮಗಳಲ್ಲಿ ಒಂದಷ್ಟು ರೋಡುಗಳು ಬಿಟ್ಟು ಹೋಗಬಹುದು. ಅದು ಮುಂದಿನ ಯೋಜನೆಯಲ್ಲಿ ಜೋಡಿಸಿಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುವ ಅಂತ ಹೇಳುತ್ತಾ ನೀವು ಆ ಕೆಲಸ ಆಗುವಾಗಲೂ ಆ ಗ್ರಾಮ ಗ್ರಾಮದಲ್ಲಿ ಕೆಲಸ ಆಗುವಾಗಲೂ ನೀವು ಕೂಡ ಆ ಗ್ರಾಮದ ಕೆಲಸಕ್ಕೆ ಸಹಕಾರ ಕೊಡಿ ನಮ್ಮ ಜನ ಎನ್ನುವ ಭಾವನೆಯಿಂದ ನಾವೆಲ್ಲ ಪ್ರೀತಿಯಿಂದ ಸಹಕಾರ ಅವರಿಗೂ ಕೂಡ ಕೊಟ್ಟು ಮುಂದಿನ ದಿನದಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದುವಂತಹ ಕಾಮಗಾರಿಗಳು ಆಗಲಿ ಈ ಗ್ರಾಮ ಉತ್ತಮ ಕೆಲಸ ಮಾಡುವ ಮುಖಾಂತರ ಮಾದರಿ ಗ್ರಾಮವಾಗಿ ಹೊರಹೊಮ್ಮಿ ತಾಲೂಕಿನಲ್ಲಿ ಹೆಸರನ್ನು ಪಡೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.
