ಮನ್ರೇಗಾ ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಗಿ ಮಾತನಾಡಿರುವ ಬಿಜೆಪಿ. ಭಾರತದ ತನಿಖಾ ಸಂಸ್ಥೆಗಳನ್ನು ಕೂಡಾ ಅವಮಾನಿಸಿದೆ : ಜಾನಿ ಕೆ ಪಿ
ಮನ್ರೇಗಾದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಆದ್ದರಿಂದ ಕಾಯ್ದೆ ಬದಲಿಸಲಾಗಿದೆ ಎಂದು ಬಿಜೆಪಿಯ ನಾಯಕರುಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವುದು ಅದರ ಬಗೆಗಿನ ಅವರ ಅಜ್ಞಾನದ ಪ್ರದರ್ಶನವಾಗಿದೆ.
ಮನ್ರೇಗಾ ಕಾಯ್ದೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕಿರುವುದು ಸಾಮಾನ್ಯವಾದ ಪ್ರಕ್ರಿಯೆ, ಮತ್ತು ಅದಕ್ಕೆ ಯೋಗ್ಯವಾದ ತನಿಖಾಸಂಸ್ಥೆಗಳೂ ದೇಶದಲ್ಲಿ ಇವೆ.
ಹಾಗಿರುವಾಗಲೇ, ಕಳೆದ 20 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದ ಕಾರ್ಮಿಕರ ಕೃಷಿಕರ ಬದುಕಿನ ಜೀವನಾಡಿಯಂತಿದ್ದ ಮನ್ರೇಗಾ ಯೋಜನೆಯನ್ನೇ ಬಿಜೆಪಿಯವರು ರದ್ದುಗೊಳಿಸಿರುತ್ತಾರೆ. ಇದು ತಾಂತ್ರಿಕವಾಗಿ ಮನೆಯಲ್ಲಿ ಕಳವು ನಡೆದ ಕಾರಣಕ್ಕೆ ಮನೆಯನ್ನೇ ಸುಟ್ಟು ಹಾಕಿದ್ದೇವೆ ಎಂದಂತಿದೆ.
ಒಂದು ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಭ್ರಷ್ಟಾಚಾರ ನಿಲ್ಲಿಸುವ ಉದ್ದೇಶವಿದ್ದು ಕಾಯ್ದೆಯನ್ನು ಬದಲಿಸಬೇಕೆಂದಿದ್ದಲ್ಲಿ ಜಗತ್ತೇ ಗೌರವಿಸುವ ಭಾರತೀಯರ ಅಸ್ಮಿತೆಯ ಭಾಗವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಯಾಕೆ ಬದಲಿಸಬೇಕಿತ್ತು ? ಕಾಯ್ದೆಯನ್ನು ಬದಲಿಸಿದರೆ ಸಾಕಿತ್ತಲ್ಲವೇ ? ಮಹಾತ್ಮ ಗಾಂಧಿಜಿಯವರ ಹೆಸರು ಏನು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುವಂತಿದೆಯೇ ?
ಅಲ್ಲವೆಂದಾದರೆ ಮಹಾತ್ಮಾ ಗಾಂಧಿಜಿಯವರ ಹೆಸರು ಬಿಜೆಪಿಯವರಿಗೆ ಯಾವ ತೊಂದರೆ ಕೊಟ್ಟಿತ್ತು ಎಂದು ಬಿಜೆಪಿಯವರು ಹೇಳಬೇಕಲ್ಲವೇ ? ಬಿಜೆಪಿಯವರ ಸಮರ್ಥನೆಗೂ ವಾಸ್ತವೀಕತೆಗೂ ಯಾವುದೇ ರೀತಿಯ ತಾಳೆಯಾಗುತ್ತಿಲ್ಲ . ಆದುದರಿಂದ ,ಇದು ಬಿಜೆಪಿಯವರ ಗಾಂಧೀಜಿ ಮೇಲಿನ ಅಸಹನೆ ಹಾಗೂ ಸಂಘಪರಿವಾರ ಫ್ರೀಣಿತ ಕಾರ್ಯಕ್ರಮಗಳ ಪೂರ್ವ ನಿರ್ಧರಿತ ರಾಜಕೀಯ ಮೂಢತ್ವ ಕೃತ್ಯದ ಫಲ ಇದು ಎನ್ನುವುದು ಬಟಾಬಯಲಾಗಿದೆ.
ಈಗ ಬಿಜೆಪಿಯವರು ವಿಲಕ್ಷಣ ಸಮರ್ಥನೆಗೆ ಮುಂದಾಗಿ ಏನೂ ಪ್ರಯೋಜನವಿಲ್ಲ. ಜನಸಾಮಾನ್ಯರೆದುರು ವಿಶೆಷವಾಗಿ ಝೆನ್ಜೀ ತಲೆಮಾರುಗಳೆದುರು ಬಿಜೆಪಿಯ ಈ ಅಭಿಪ್ರಾಯ ನಗೆಪಾಟಾಲಿಗೀಡಾಗುತ್ತಿದೆ.
ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧಿಯ ಮತ್ತು ರಾಷ್ಟ್ರ ಸ್ವಾತಂತ್ರ್ಯಗೊಳ್ಳುವಲ್ಲಿ ಮತ್ತು ಭಾರತವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕಾಂಗ್ರೆಸ್ಸಿನ ಕೊಡುಗೆಗಳ ನೆನಪುಗಳನ್ನು ಅಳಿಸುವ ಬಿಜೆಪಿಯ ಧ್ವೇಷದ ಕೆಟ್ಟ ನಿಲುವುಗಳು ಒಂದೊಂದಾಗಿ ಬಯಲಾಗುತ್ತಲೇ ಇದೆ.
ಒಂದು ವೇಳೆ ಭ್ರಷ್ಟಾಚಾರ ಎನ್ನುವುದು ಬಿಜೆಪಿಯವರಿಗೆ ಒಪ್ಪಿಕೊಳ್ಳಲಾಗದ ವಿಷಯವಾಗಿದ್ದಲ್ಲಿ ,ಅದನ್ನು ಎಲ್ಲರೂ ಗೌರವಿಸಲೇ ಬೇಕು ಆದರೆ ಕೆಲವು ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ಕೊಡಲೇಬೇಕು.
ಅಶೋಕ್ ಚೌವಾಣ್ ಎನ್ನುವ ಕಾಂಗ್ರೆಸ್ ನಾಯಕನ ಮೇಲೆ ಆದರ್ಶ್ ಹೌಸಿಂಗ್ ವಿಷಯದಲ್ಲಿ ED ಮತ್ತು CBI ಕೇಸ್ ಹಾಕಿತ್ತು , ಆದರೆ 2024 ರಲ್ಲಿ ಅದೇ ವ್ಯಕ್ತಿ ಬಿಜೆಪಿ ಸೇರ್ಪಡೆಯಾದರು .ನಂತರ
ಏನಾಯಿತು ಅವರ ಮೇಲಿನ ಭ್ರಷ್ಟಾಚಾರದ ಆರೋಪ ?
ನವೀನ್ ಜಿಂದಾಲ್ ಎನ್ನುವ ಕಾಂಗ್ರೆಸ್ ನಾಯಕನ ಮೇಲೆ ಕಲ್ಲಿದ್ದಲು ವಿಚಾರದಲ್ಲಿ ಮತ್ತು ವಿದೇಶೀ ಹಣವರ್ಗಾವಣೆ ವಿಷಯವಾಗಿ ಕೇಸ್ ಹಾಕಲಾಗಿತ್ತು ,ಆದರೆ 2024 ರಲ್ಲಿ ಅವರೂ ಬಿಜೆಪಿಗೆ ಸೇರ್ಪಡೆಗೊಂಡರು ನಂತರ ಏನಾಯಿತು ಅವರ ಮೇಲಿನ ಕೇಸ್ ಬಿಜೆಪಿಯವರು ಹೇಳಬೇಕಲ್ಲವೇ ? ಕಾಂಗ್ರೆಸ್ ನಾಯಕನಾಗಿದ್ದ ಬಾಬಾ ಸಿಧ್ದಿಕಿ ಎನ್ನುವ ವ್ಯಕ್ತಿ ಮೇಲೆ ಸ್ಲಂ ರೀಡೆವಲೆಪ್ಮೆಂಟ್ ವಿಷಯದಲ್ಲಿ ಭ್ರಷ್ಟಾಚಾರದ ಆರೋಪ ಬಂದು ED ಯಿಂದ ರೈಡಿಗೂ ಒಳಗಾಗಿದ್ದರು , ಅವರೂ 2024 ರಲ್ಲಿ ಎನ್ ಡಿ ಎ ಯೊಂದಿಗೆ ಕೈಜೋಡಿಸಿದರು. ಏನಾಯಿತು ಅವರ ಮೇಲಿನ ಕೇಸ್ ? ಟಿಎಂಸಿ ನಾಯಕನಾಗಿದ್ದ ಸುವೇಂದು ಅಧಿಕಾರಿ ಮೇಲೆ ಸಿಬಿಐ ನಾರದ ಸ್ಟಿಂಗ್ ಆಪರೇಷನ್ ಕೇಸ್ ಹಾಕಲಾಗಿತ್ತು, ಆದರೆ ನಂತರ 2020 ರಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡರು ಏನಿದರ ಅರ್ಥ ? ಟಾಪಸ್ ರಾಯ್ ಎನ್ನುವ ಟಿಎಂಸಿ ನಾಯಕನ ಮೇಲೆ ಮುನ್ಸಿಪಲ್ ನೇಮಕಾತಿ ಮತ್ತು ಅನಧಿಕೃತ ಆಸ್ತಿ ಸಂಪಾದನೆ ವಿಷಯದಲ್ಲಿ ED ಯಿಂದ ಕೇಸ್ ಹಾಕಲಾಗಿತ್ತು ಆದರೆ ಅವರೂ 2024 ರಲ್ಲಿ ಜೈಲಿಗೆ ಹೋದುದಲ್ಲ ಬಿಜೆಪಿಗೆ ಸೇರ್ಪಡೆ ಆದರು ಎನ್ನುವುದು ಬಿಜೆಪಿಯವರು ಸ್ವಲ್ಪ ಅರ್ಥೈಸಿಕೊಳ್ಳುವುದು ಉತ್ತಮ.
ಹಾಗೇ ಹಿಂಮಂತ್ ಬಿಸ್ವಾಸ್ ಶರ್ಮಾ (ಕಾಂಗ್ರೆಸ್) ,ಸಂಜಯ್ ಸೇತ್ (ಎಸ್ಪಿ) ,ರಾಣಿಂದರ್ ಸಿಂಗ್ (ಕಾಂಗ್ರೆಸ್), ಸಿ.ಎಂ ರಮೇಶ್ ,(ಟಿಡಿಪಿ) ಯಾಮಿನಿ ಜಾದವ್ (ಶಿವಸೇನೆ) ಭಾವನಾ ಗಾವಲಿ (ಶಿವಸೇನೆ) ಪ್ರತಾಪ್ ಸರ್ನಾಯಿಕ್ (ಶಿವಸೇನೆ) ಹಸನ್ ಮುಶ್ರಿಫ್ (ಎನ್ಸಿಪಿ) ಜಗನ್ ಬುಜ್ಬಲ್ (ಎನ್ಸಿಪಿ) ಪ್ರಫುಲ್ ಪಟೇಲ್ (ಎನ್ಸಿಪಿ)
ಇತ್ತೀಚೆಗೆ ವಿಮಾನ ಅಫಘಾತದಲ್ಲಿ ಮಡಿದ ಅಜಿತ್ ಪವಾರ್ ಇವರೆಲ್ಲರ ಮೇಲೆ ಇಡಿ,ಸಿಬಿಐ,ಐಟಿ ಇಲಾಖೆಯಿಂದ ವಿವಿಧ ರೀತಿಯ ಕೇಸ್ ಹಾಕಲಾಗಿತ್ತು ಆದರೆ ಇವರ್ಯಾರೂ ಜೈಲಿಗೆ ಹೋದುದ್ದಲ್ಲ ಅವರೆಲ್ಲರೂ ಬಿಜೆಪಿ ಅಥವಾ ಎನ್ಡಿಎ ಗೆ ಸೇರ್ಪಡೆ ಆದವರು ಅಲ್ಲಿಗೇ ಅವರ ಕೇಸ್ ವಿಚಾರದಲ್ಲಿಯೂ ಬದಲಾವಣೆ ಆಯಿತಲ್ಲವೇ ?ಇದಲ್ಲವೇ ಭ್ರಷ್ಟಾಚಾರ ಸಹಿಸದ ಬಿಜೆಪಿಯವರ ನಕಲಿ ಮುಖವಾಡ ? ನಮ್ಮದೇ ರಾಜ್ಯದ ಜನಾರ್ದನ ರೆಡ್ಡಿ ಕೋರ್ಟಿನಿಂದ ಶಿಕ್ಷಿಸಲ್ಪಟ್ಟ ವ್ಯಕ್ತಿ ಆಗಿರಲಿಲ್ಲವೆ ? ಈಗ ಅವರು ಯಾರೊಂದಿಗೆ ಇದ್ದಾರೆ ?ಇದು ಭ್ರಷ್ಟಾಚಾರದ ಬಗೆಗಿನ ಬಿಜೆಪಿಯವರ ನಿಲುವು ಎನ್ನುವು ಈಗ ಜಗಜ್ಜಾಹೀರಾಗಿದೆ. ಹೀಗಾಗಿ 140 ವರ್ಷದ ಇತಿಹಾಸವಿರುವ ಕಾಂಗ್ರೆಸ್ಸಿನಲ್ಲಿ ಭ್ರಷ್ಟಾಚಾರಿಗಳಾಗಿದ್ದೋರು ಈಗ ಬಿಜೆಪಿ ಸೇರಲಾಗಿ ಕಾಂಗ್ರೆಸ್ ಈಗ ಶುಧ್ಧಿಗೊಂಡು ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಗಿಂತ ಅತ್ಯಂತ ಶುಧ್ಧವಾಗಿದೆ
.
ಆದ್ದರಿಂದ ಭ್ರಷ್ಟಾಚಾರದೊಂದಿಗೆ ಒಪ್ಪಂದಕ್ಕೇರ್ಪಟ್ಟಿರುವ ಬಿಜೆಪಿಯವರಿಗೆ ಭ್ರಷ್ಟಾಚಾರ ನಡೆದ ಕಾರಣ ಗಾಂಧಿಜಿಯವರ ಹೆಸರು ಬದಲಿಸಲಾಗಿದೆ ಎಂದು ವಾದ ಮಾಡುವ ಯೋಗ್ಯತೆ ಖಂಡಿತಾ ಇಲ್ಲ .
ಮನ್ರೇಗಾ ಕಾಯ್ದೆ
ಬದಲಾವಣೆಗೆ ಕಾರಣ ಬಹಳ ಸ್ಪಷ್ಟ, ಇದು ಬಿಜೆಪಿಯ ಕೂಡಿಬಾಳುವಿಕೆಯನ್ನು ಧ್ವೇಷಿಸುವ ಕೀಳು ರಾಜಕೀಯದ ಕಾರಣಕ್ಕಾಗಿ ಆಗಿದೆ. ಅಹಿಂಸಾವಾದಿಯಾಗಿದ್ದು ,ಸರ್ವರೂ ಅಭಿವೃದ್ಧಿ ಹೊಂದಬೇಕು ಎನ್ನುವ ಆಶಯದೊಂದಿಗೆ ಬದುಕಿ ಬಾಳಿ, ನನ್ನ ಬದುಕೇ ನನ್ನ ಸಂದೇಶ ಎಂದು ಸಾರಿದ ಮಹಾತ್ಮ ಗಾಂಧಿಜಿಯವರ ಶಾಂತಿಯ ಸತ್ಯದ ಅಹಿಂಸೆಯ ಸಿದ್ದಾಂತ ಸಹಿಸಲು ಕೋಮುವಾದಿ ಬಿಜಿಪಿಯಿಂದ ಯಾವತ್ತೂ ಸಾದ್ಯವೇ ಇಲ್ಲ.
ಆದ್ದರಿಂದ ಯಾಕಾಗಿ ಗಾಂಧೀಜಿಯವರಿಗೆ 1948 ರಲ್ಲಿ ಗುಂಡು ಹೊಡೆದು ಕೊಲ್ಲಲಾಯಿತೋ ಅದೇ ಕಾರಣಗಳಿಂದಲೇ ಇಂದಿಗೂ ಗಾಂಧೀಜಿಯವರ ಸಿದ್ಧಾಂತಕ್ಕು ಕೂಡ ಗುಂಡುಹೊಡೆಯಲಾಗುತ್ತಿದೆ,ಆದರೆ ಈ ಯೆಲ್ಲಾ ಕುತಂತ್ರಗಳನ್ನು ಮೆಟ್ಟಿನಿಂತು ಕಾಂಗ್ರೆಸ್ ದೇಶದಲ್ಲಿ ಮತ್ತೆ ಪುಠಿದೇಳುವ ದಿನಗಳು ದೂರವಿಲ್ಲ ಎಂದು ಜಾನಿ ಕೆಪಿ ತಿಳಿಸಿದರು.


