Featured, ಅಂಕಣ, ಇತರೆ, ಸ್ಥಳೀಯ

ಜೆಫ್ರಿ ಎಪ್ಸ್ಟೈನ್ ಸಾಮ್ರಾಜ್ಯದ ಕತ್ತಲೆ ಮುಖ: ಗಿಸ್ಲೇನ್ ಮ್ಯಾಕ್ಸ್ವೆಲ್ ಇನ್ನೂ ಮೌನವೇ?

ಜಗತ್ತನ್ನು ನಡುಗಿಸಿದ ಲೈಂಗಿಕ ಕುತಂತ್ರದ ಒಳಕಥೆ !!

ಬರಹ : ಸಾಹುಕಾರ್ ಅಚ್ಚು 

ಈಗ ವಿಶ್ವದಾದ್ಯಂತ ಕೋಲಾಹಲ ಎಬ್ಬಿಸಿರುವ ಹೆಸರು.
ನಮ್ಮ ಮಾಧ್ಯಮಗಳ ಪಕ್ಷಪಾತೀ ನಿಲುವು ಅಲ್ಲದೇ ಹೋಗಿದ್ದರೆ ಈ ಹೊತ್ತಿಗೆ ನಮ್ಮ ದೇಶದಲ್ಲೂ ಅನೇಕ ಸ್ಥಿತ್ಯಂತರಗಳು ಈತನ ಕಾರಣಕ್ಕೆ ನಡೆದು ಹೋಗಿರುತ್ತಿತ್ತು. ತನ್ನದೇ ಒಂದು ಸಾಮ್ರಾಜ್ಯ ನಿರ್ಮಾಣ ಮಾಡಿಕೊಂಡು ಒಬ್ಬ ಮನುಷ್ಯ ಕನಸಲ್ಲೂ ಊಹಿಸಲಾಗದಷ್ಟು ಕ್ರೌರ್ಯ ಮತ್ತು ಲೈಂಗಿಕ ವಿಕೃತಿಗಳ ಮೂಲಕ ಆತ ಮಾಡಿಕೊಂಡ ಕಿತಾಪತಿಗಳು ಸಣ್ಣದೇನಲ್ಲ. ಸಣ್ಣ ಸಣ್ಣ ಮಕ್ಕಳನ್ನೂ ತನ್ನ ಕಾಮ ತೃಷೆ ತೀರಿಸಿಕೊಂಡು ಅತಿಥಿಗಳಿಗೆ ಹಂಚುತ್ತಿದ್ದ. ಮನುಷ್ಯ ಮಾಂಸವನ್ನು ಜತೆ ಇದ್ದವರಿಗೆ ಬಡಿಸುತ್ತಿದ್ದ ಎಂದರೆ ಊಹಿಸಿ ನೋಡಿ.

ಹೀಗಿದ್ದ ಎಫ್ಸ್ಟೈನ್ ಗೂ ಒಬ್ಬಳು ಪ್ರೇಯಸಿ ಇದ್ದಳು. ಆತನ ಲೈಂಗಿಕ ಅತಿರೇಕಗಳಿಗೆ ನರಹತ್ಯೆಗಳಂಥಾ ಕೃತ್ಯಗಳಿಗೆ ಒಬ್ಬಳು ದಾಸಿಯಂತೆ ನಿಂತು ಸಹಕರಿಸಿದಳು ಎಂದರೆ ನಂಬಲು ಸಾಧ್ಯವೇ.
ಹೌದು, ಆಕೆಯ ಹೆಸರು ಗಿಸ್ಲೇನ್ ಮ್ಯಾಕ್ಸ್ವೆಲ್ . 1970 ರ ಕಾಲದ ಬ್ರಿಟನ್ ನ ಮಾಧ್ಯಮ ಲೋಕದ ದೈತ್ಯ ಮತ್ತು ಅಲ್ಲಿನ ಎಂಪಿ ಆಗಿದ್ದ ರಾಬರ್ಟ್ ಮ್ಯಾಕ್ಸ್ ವೆಲ್ ನ ಮಗಳು. ರಾಬರ್ಟ್ ಮ್ಯಾಕ್ಸ್ ವೆಲ್ ಪ್ಯಾರಿಸ್ ನಲ್ಲಿ ಜನಿಸಿದರೂ ಬದುಕಿದ್ದು ಲಂಡನ್ ನಲ್ಲಿ. ತನ್ನ ಪರಿವಾರದವರನ್ನೆಲ್ಲ ಹಿಟ್ಲರನ ನಾಸೀಕದನದಲ್ಲಿ ಕಳೆದುಕೊಂಡ ಆತ ಬ್ರಿಟನ್ ನಲ್ಲಿ ನೆಲೆಯೂರಿ ತನ್ನ ಆಧಿಪತ್ಯ ಸ್ಥಾಪಿಸಿಕೊಂಡ.

ಹೀಗೇ ತನ್ನ ಬದುಕಿನಲ್ಲಿ ಉತ್ತುಂಗ ಸ್ಥಿತಿಯಲ್ಲಿ ಇರುವಾಗಲೇ ನಿಗೂಡವಾಗಿ ಸಾವನ್ನಪ್ಪುತ್ತಾನೆ. ಅದು ಕೊಲೆಯೋ ಆತ್ಮಹತ್ಯೆಯೋ ಸಹಜ ಸಾವೋ ಎನ್ನುವುದರ ಬಗ್ಗೆ ಈಗಲೂ ಗೊಂದಲಗಳು ಉಳಿದುಕೊಂಡಿದೆ.

ನಂತರ ಜೆಫ್ರಿ ಎಡ್ವರ್ಡ್ ಎಪ್ಸ್ಟೈನ್ ಎಂಬ ಆಗಿನ ಪ್ರಖ್ಯಾತ ಡೋನರ್ ಮತ್ತು ನಿಗೂಢ ಕ್ರಿಮಿನಲ್ ನಿಂದ ಪ್ರಭಾವಿತಳಾಗಿ ಈ ರಾಬರ್ಟ್ ಮ್ಯಾಕ್ಸ್ ವೆಲ್ ನ ಮಗಳು ಗಿಸ್ಲೇನ್ ಮ್ಯಾಕ್ಸ್ ವೆಲ್ ಜತೆಯಾಗುತ್ತಾರೆ. ಆತನ ಎಲ್ಲಾ ಕಾಯಕಗಳಿಗೆ ಬಲಗೈಯಂತೆ ನಿಂತು ಬಿಡುತ್ತಾಳೆ.
ಎಫ್ಸ್ಟೇನ್ ನ ಲೈಂಗಿಕ ದೌರ್ಬಲ್ಯದ ಬಗ್ಗೆ ಚೆನ್ನಾಗಿ ಅರಿತಿದ್ದ ಗಿಸ್ಲೇನ್ ತಾನು ಭೇಟಿಯಾಗುವ ಮತ್ತು ತನ್ನ ಸಂಪರ್ಕಕ್ಕೆ ಸಿಗುವ ಎಳೆಯ ಮಕ್ಕಳನ್ನು ಮತ್ತು ಮಹಿಳೆಯರನ್ನು ಎಫ್ಸ್ಟೈನ್ ನ ತೆಕ್ಕೆಗೆ ತಲುಪಿಸಿ ಸಹಕರಿಸಿದ್ದಲ್ಲದೇ ತಾನೂ ಕೂಡಾ ಆತನ ವಿಕೃತ ಲೋಕದಲ್ಲಿ ಮಿಂದೇಳುತ್ತಾಳೆ. ಎಫ್ಸ್ಟೈನ್ ನ ಸಾಮ್ರಾಜ್ಯಕ್ಕೆ ಕಾಲಿಟ್ಟ ಪ್ರಮುಖರ ಫೋಟೋ ವೀಡಿಯೋಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಷಯದಲ್ಲೂ ಸಂಪೂರ್ಣ ಸಹಕಾರ ನೀಡುತ್ತಾಳೆ.

ಹೀಗಿರಬೇಕಾದರೆ 2006 ರಲ್ಲಿ ಒಮ್ಮೆ ಜೈಲಿಗೆ ಹೋಗುವ ಎಫ್ಸ್ಟೈನ್ ನಂತರ ಅಲ್ಲಿಂದ ಜಾಮೀನಿನಲ್ಲಿ ಹೊರಬರುತ್ತಾನೆ.
ನಂತರ ಮತ್ತೆ ಜೈಲಿಗೆ ಹೋಗುವ ಆತ 2019 ರಲ್ಲಿ ಜೈಲಿನೊಳಗಡೆಯೇ ಅತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿ ಆತನ ಕಥೆ ಮುಗಿಯುತ್ತದೆ ಮತ್ತು ಆ ಕಾರಣಕ್ಕೆ ಹಲವು ಗಣ್ಯರ ಮುಖವಾಡ ಉಳಿಯುತ್ತದೆ. ಆದರೆ ಆತನ ಪ್ರೇಯಸಿ ಈಗಲೂ ಬದುಕಿದ್ದಾಳೆ. ಮತ್ತು ಒಂದೊಂದೇ ಫೈಲುಗಳು ಹೊರಬರುತ್ತಿರುವ ಹಿನ್ನಲೆಯಲ್ಲಿ ಖಂಡಿತಾ ಆಕೆ ಬಾಯ್ಬಿಟ್ಟಿದ್ದೇ ಆದರೆ ಈಗ ಪೈಲುಗಳಲ್ಲಿ ಸಿಗುವ ಸಾಕ್ಷ್ಯಗಳಿಗಿಂತ ಜಾಸ್ತಿ ಕಥೆಗಳು ಸುರುಳಿಬಿಚ್ಚಿಕೊಳ್ಳುತ್ತದೆ ಮತ್ತು ಹಲವರ ಬಣ್ಣ ಬಯಲಾಗುತ್ತದೆ.

ಶಿಕ್ಷೆಗೊಳಪಟ್ಟು ಜೈಲಲ್ಲಿರುವ ಗಿಸ್ಲೇನ್ ಮ್ಯಾಕ್ಸ್ ವೆಲ್ ಹೊರಬರುವ ಪ್ರಯತ್ನದಲ್ಲಿದ್ದಾಳೆ. ಹೊರಬರುತ್ತಾಳೋ , ಹೆಚ್ಚುವರಿ ವಿಚಾರಣೆ ಮೂಲಕ ಬಿಡುಗಡೆಯಾಗುತ್ತಿರುವ ಫೈಲುಗಳಲ್ಲಿ ಬರುತ್ತಿರುವ ಹೆಸರುಗಳ ಬಗ್ಗೆ ಹೊಸ ಮಾಹಿತಿಗಳನ್ನು ಕೊಡುತ್ತಾರೋ ಅಥವಾ ಅಲ್ಲೇ ನಿಗೂಢವಾಗಿ ಸಾವನ್ನಪ್ಪಿ ಕ್ರೂರ ಮುಖಗಳ ಬಗ್ಗೆ ನಮಗೆ ತಿಳಿಯದೇ ಕಾಲಗರ್ಭದಲ್ಲೇ ಹುದುಗಿಹೋಗುತ್ತದೋ ಎನ್ನುವುದು ಕಾದುನೋಡಬೇಕಷ್ಟೇ..

ಬರಹ : ಸಾಹುಕಾರ್ ಅಚ್ಚು

 

Related Posts