♦“ಪರದೂಷಣೆಯಿಂದ ದೂರವಿರುವುದೂ ಉಪವಾಸದ ಅವಿಭಾಜ್ಯ ಭಾಗ” : ಉಸ್ತಾದ್ ಆದಂ ದಾರಿಮಿ ಗಾಳಿಮುಖ
ಅಜ್ಜಾವರ, ಫೆ. 23: ಝೈನಿಯಾ ಎಸ್.ಎನ್.ಇ.ಸಿ ನಿರ್ಮಾಣ ಹಂತದಲ್ಲಿರುವ ಮಹಿಳಾ ವಿದ್ಯಾಸಂಸ್ಥೆಯಲ್ಲಿ ಮಾಸಿಕ ಮಜ್ಲಿಸುನ್ನೂರ್, ರಮಳಾನ್ ಪ್ರಭಾಷಣ ಹಾಗೂ ಮರ್ಹೂಂ ಬಿ. ಫಾತಿಮ್ಮ ಹಜ್ಜುಮ್ಮ ಇರುವಂಬಳ್ಳ ಅವರ ತಹ್ಲೀಲ್ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಅಕ್ರಂ ಅಲಿ ತಂಙಳ್ ವಹಿಸಿ ದುಆ ನೆರವೇರಿಸಿದರು.

ರಮಳಾನ್ ಪ್ರಭಾಷಣ ನಡೆಸಿದ ಉಸ್ತಾದ್ ಆದಂ ದಾರಿಮಿ ಗಾಳಿಮುಖ ಮಾತನಾಡಿ, “ಉಪವಾಸವೆಂದರೆ ಕೇವಲ ಹೊಟ್ಟೆಗೆ ಅನ್ನ–ಆಹಾರ ತ್ಯಜಿಸುವುದಲ್ಲ. ಪರದೂಷಣೆ ಮಾಡುವುದು, ಇತರರಿಗೆ ನೋವುಂಟುಮಾಡುವ ಮಾತುಗಳಾಡುವುದು ಉಪವಾಸ ಭಂಗಕ್ಕೆ ಕಾರಣವಾಗುತ್ತದೆ. ಸರ್ವ ಕೆಡುಕುಗಳಿಂದ ಮನಸ್ಸು ಮತ್ತು ದೇಹದ ಅವಯವಗಳನ್ನು ನಿಯಂತ್ರಿಸುವುದೇ ನಿಜವಾದ ಉಪವಾಸ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಝೈನಿಯಾ ಟ್ರಸ್ಟ್ ಅಧ್ಯಕ್ಷ ಖತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು, ಎಕ್ಸಿಕ್ಯೂಟಿವ್ ಸದಸ್ಯರಾದ ಇಬ್ರಾಹಿಂ ಬಾತಿಷ (ಡಿಗ್ನಿಟಿ ಗೋಲ್ಡ್), ಮಹಮ್ಮದ್ ಹಾಜಿ ತುಪ್ಪಕಲ್, ಝೈನಿಯಾ ಪ್ರಧಾನ ಕಾರ್ಯದರ್ಶಿ ಮೊಹಿಯದ್ದೀನ್ ಅನ್ಸಾರಿ, ವರ್ಕಿಂಗ್ ಕಾರ್ಯದರ್ಶಿ ಶಾಫಿ ದಾರಿಮಿ ಅಜ್ಜಾವರ, ಕಾರ್ಯದರ್ಶಿ ಹಸೈನಾರ್ ಹಾಜಿ ಇರುವಂಬಳ್ಳ, ಝೈನಿಯಾ ಮಜ್ಲಿಸುನ್ನೂರ್ ಅಧ್ಯಕ್ಷ ಶರೀಫ್ (ರಿಲಾಕ್ಸ್), ಉಸ್ತಾದರಾದ ಮಹಮ್ಮದ್ ರಫೀಕ್ ಹನೀಫಿ, ಹನೀಫ್ ಉಸ್ತಾದ್ ಬೇಲ್ಯ, ನೌಶಾದ್ ಅಝ್‌ಹರಿ ಸದರ್ ಅಡ್ಕ ಸೇರಿದಂತೆ ಹಲವಾರು ಉಲಮಾ, ನಾಯಕರು ಹಾಗೂ ಊರವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಇಫ್ತಾರ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮವನ್ನು ಝೈನಿಯ್ಯ ಮಜ್ಲಿಸುನ್ನೂರ್ ಪ್ರ ಕಾರ್ಯದರ್ಶಿ ಸಿದ್ದೀಕ್ ಅಡ್ಕ ಸ್ವಾಗತಿಸಿ ವಂದಿಸಿದರು.


