ರಿಯಾದ್, ಫೆಬ್ರವರಿ 28: ಪ್ರದೇಶದಲ್ಲಿ ಮುಂದುವರಿಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಂಬಸಿ ಆಫ್ ಇಂಡಿಯಾ, ರಿಯಾದ್ ಭಾರತೀಯರಿಗೆ ಮಹತ್ವದ ಸಲಹೆ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯರು ಜಾಗರೂಕರಾಗಿರಬೇಕು, ಅಲ್ಲಿನ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಸ್ಥಳೀಯ ಅಧಿಕಾರಿಗಳು ಮತ್ತು ರಾಯಭಾರಿ ಕಚೇರಿ ನೀಡುವ ಸೂಚನೆಗಳನ್ನು ಅನುಸರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಿಯಾದ್‌ನ ಭಾರತೀಯ ರಾಯಭಾರಿ ಕಚೇರಿ ಹಾಗೂ ಜೆದ್ದಾದ ಭಾರತೀಯ ವಾಣಿಜ್ಯ ದೂತಾವಾಸವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿದ್ದಾಗ ಹೊಸ ಅಪ್‌ಡೇಟ್‌ಗಳು ಮತ್ತು ಸಲಹೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ತುರ್ತು ಪರಿಸ್ಥಿತಿಗಳಿಗೆ 24×7 ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದೆ. ಅವುಗಳು ಹೀಗಿವೆ:
00-966-11-4884697
00-966-542126748 (ವಾಟ್ಸಪ್ ಮಾತ್ರ)
800 247 1234 (ಟೋಲ್ ಫ್ರೀ)
ಇ-ಮೇಲ್: cw.riyadh@mea.gov.in
ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯರು ಆತಂಕಕ್ಕೊಳಗಾಗದೇ, ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ರಾಯಭಾರಿ ಕಚೇರಿ ಮನವಿ ಮಾಡಿದೆ.



