ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆಯು ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಸುಮಾರು 22 ಸಾವಿರ ರೂಪಾಯಿ ಮೌಲ್ಯದ ಅಡುಗೆ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದರು. ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಎಸ್.ಇ ಜುಬೈರ್ ರವರು ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರಿಗೆ ಅಡುಗೆ ಪಾತ್ರೆಗಳನ್ನು ಮಾ. 8 ರಂದು ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಕಾರ್ಯದರ್ಶಿ ಕೆ.ಎಂ ಮೂಸಾನ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಮೊಯಿದು ಕ್ಕುಕ್ಕುಂಬಳ, ಅಮೀರ್ ಕುಕ್ಕುಂಬಳ, ಮುಜೀಬ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಟಿ.ಎಂ ಜಾವೇದ್ ತೆಕ್ಕಿಲ್, ಎ.ಎ ಸಿದ್ಧೀಕ್, ಎಸ್.ಕೆ ಎಸ್.ಎಸ್.ಎಫ್ ಪದಾಧಿಕಾರಿಗಳಾದ ಆಶಿಕ್ ಕುಕ್ಕುಂಬಳ, ಮುಝಮ್ಮಿಲ್ ಅಝಲ್, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

