Featured, ಇತರೆ, ಸ್ಥಳೀಯ

ಅರಂತೋಡು: ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಅರಂತೋಡು, ಮಾ.20: ಪವಿತ್ರ ರಮಝಾನ್ ಮಾಸದ ಅಂತ್ಯವನ್ನು ಸೂಚಿಸುವ ಈದುಲ್ ಫಿತ್ರ್ ಹಬ್ಬವನ್ನು ಅರಂತೋಡು ಪ್ರದೇಶದಲ್ಲಿ ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು.
ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ ಬೆಳಗ್ಗೆ ನಡೆದ ಈದ್ ನಮಾಜ್ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಖತೀಬ್ ರಾದ ಬಹು ಇಸ್ಮಾಯಿಲ್ ಪೈಝಿ ಅವರ ನೇತೃತ್ವದಲ್ಲಿ ಈದ್ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಅವರು ಸಮಾಜದಲ್ಲಿ ಶಾಂತಿ, ಸಹೋದರತ್ವ ಹಾಗೂ ಪರಸ್ಪರ ಪ್ರೀತಿ ಬೆಳೆಸುವ ಸಂದೇಶವನ್ನು ನೀಡಿದರು.
ನಮಾಜ್ ನಂತರ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಮನೆಮನೆಗಳಿಗೆ ತೆರಳಿ  ಹಬ್ಬದ ಸಂತೋಷವನ್ನು ಹಂಚಿಕೊಂಡರು. ಚಿಕ್ಕವರು ದೊಡ್ಡವರಿಂದ ಆಶೀರ್ವಾದ ಪಡೆಯುವ ದೃಶ್ಯಗಳು ವಿಶೇಷವಾಗಿ ಗಮನಸೆಳೆಯುವಂತಾಗಿದ್ದವು.

m

Related Posts