Featured, ಇತರೆ, ಸ್ಥಳೀಯ

ಸುಳ್ಯ ಮೊರ್ಗಪಣೆ ಬಳಿ ಕಂಟೇನರ್ ಲಾರಿ ಪಲ್ಟಿ – ಕಾರಿಗೆ ಹಾನಿ, ಚಾಲಕನಿಗೆ ಗಾಯ

ಕಂಟೇನರ್ ಲಾರಿಯಿಂದ ಡೀಸೆಲ್ ಸೋರಿಕೆ ಸಂಭವಿಸಿ ರಸ್ತೆ ಮೇಲೆ ಹರಡಿರುವುದರಿಂದ ಆ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ 

ಸುಳ್ಯ : ಸುಳ್ಯ ಮೊರ್ಗಪಣೆ ಸಮೀಪ ಇಂದು ರಾತ್ರಿ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ವರದಿಯಾಗಿದೆ.
ಲಾರಿ ಪಲ್ಟಿಯಾಗುವ ಸಂದರ್ಭದಲ್ಲಿ ರಸ್ತೆ ಮೇಲೆ ಸಂಚರಿಸುತ್ತಿದ್ದ ಕಾರಿನ ಮೇಲೆ ಬೊರಲಾಗಿ ಬಿದ್ದ ಪರಿಣಾಮ ಕಾರಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಲಾರಿಯ ಚಾಲಕ ಗಾಯಗೊಂಡಿದ್ದು, ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದಲ್ಲದೆ, ಲಾರಿಯಿಂದ ಡೀಸೆಲ್ ಸೋರಿಕೆ ಸಂಭವಿಸಿ ರಸ್ತೆ ಮೇಲೆ ಹರಡಿರುವುದರಿಂದ ಆ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
m

Related Posts