Featured, ಇತರೆ, ಸ್ಥಳೀಯ

ಕಲ್ಲುಗುಂಡಿ : ಮದರಸ ಶೈಕ್ಷಣಿಕ ವರ್ಷ ಪ್ರಾರಂಭ

ಕಲ್ಲುಗುಂಡಿ : ಹಯಾತುಲ್ ಇಸ್ಲಾಂ ಮದ್ರಸ ಮಿಹ್ರಜಾನುಲ್ ಬಿದಾಯ ಮದ್ರಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮಾಚ್೯ 28 ಶನಿವಾರ  ಬೆಳಿಗ್ಗೆ   ಮದ್ರಸ ಹಾಲ್ ನಲ್ಲಿ ನೆರವೇರಿತು

ಜೆ ಎಂ . ಜಮಾಅತ್ ಕಮಿಟಿ ಅಧ್ಯಕ್ಷರಾದ ಜನಾಬ್ ಆಲಿ ಹಾಜಿ ಯವರ ಘನ ಅಧ್ಯಕ್ಷತೆಯೊಂದಿಗೆ, ಮಸೀದಿ ಖತೀಬ್ ಉಸ್ತಾದ್ ಬಹು ನಾಸಿರ್ ದಾರಿಮಿ ಯವರು ದು ಆ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸದರ್ ಮುಹಲ್ಲಿಮ್ ಜಲಾಲುದ್ದೀನ್ ಯಮಾನಿ, ಮುಹಝಿನ್ ಮೊಯಿದಿನ್ ಕುಂಞಿ ಮುಸ್ಲಿಯಾರ್ , ಮುಹಲ್ಲಿಮ್ ಗಳಾದ ಸಾಜೀದ್ ಅಝ್ಹರಿ, ಇಬ್ರಾಹಿಂ ವಹಬಿ, ಜಮಾಹತ್ ಆಡಳಿತ ಮಂಡಳಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸರ್ವರಿಗೂ ಸಿಹಿ ಹಾಗೂ ಪಾನಿಯ ವಿತರಣೆ ನಡೆಯಿತು.

m

Related Posts