ಅಂತರಾಷ್ಟ್ರೀಯ, ಇತರೆ, ಸ್ಥಳೀಯ

ಇರಾನ್–ಅಮೆರಿಕಾ ಉದ್ವಿಗ್ನತೆಗೆ ತಾತ್ಕಾಲಿಕ ವಿರಾಮ: 2 ವಾರಗಳ ಕದನ ವಿರಾಮಕ್ಕೆ ಒಪ್ಪಿದ ಟೆಹ್ರಾನ್

ಡೊನಾಲ್ಡ್ ಟ್ರಂಪ್ ದಾಳಿ ಸ್ಥಗಿತ ಘೋಷಣೆ ಬಳಿಕ ಮಾತುಕತೆ ಆರಂಭ

ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ಶಾಂತಿ ಸಿಕ್ಕಂತಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಸೈನಿಕ ದಾಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಹಿನ್ನೆಲೆ, ಇರಾನ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ವಿಷಯವನ್ನು ದೃಢಪಡಿಸಿದ್ದು, “ಅಮೆರಿಕಾ ದಾಳಿಗಳನ್ನು ನಿಲ್ಲಿಸಿದರೆ, ಇರಾನ್ ತನ್ನ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತದೆ” ಎಂದು ತಿಳಿಸಿದ್ದಾರೆ.
ಮುಖ್ಯವಾಗಿ, ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವವಾದ ಸ್ಟ್ರೇಟ್ ಆಫ್ ಹೋರ್ಮುಜ್ ಮೂಲಕ ಸಾಗಣೆ ಸುರಕ್ಷಿತವಾಗಿರಲು ಇರಾನ್ ಸಶಸ್ತ್ರ ಪಡೆಗಳು ಸಮನ್ವಯ ಸಾಧಿಸಲಿವೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ ಉಭಯ ದೇಶಗಳ ನಡುವೆ ಮಾತುಕತೆಗಳು ಇಸ್ಲಾಮಾಬಾದ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿವೆ. ಎಂದು ಅಲ್ ಜಝಿರಾ ವರದಿ ಮಾಡಿದೆ
ಎರಡು ವಾರಗಳ ಕದನ ವಿರಾಮದ ಅವಧಿಯಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಜಾಗತಿಕ ಗಮನ ನೆಟ್ಟಿದೆ.
m

 

Related Posts