Featured, ಅಂಕಣ, ಸ್ಥಳೀಯ

ರಾಷ್ಟ್ರದ 23 ಲಕ್ಷ ವಿದ್ಯಾರ್ಥಿಗಳ ಕನಸು ಕುಗ್ಗಿತೇ? : ಸುಳ್ಯದಲ್ಲಿ SSF ವಿದ್ಯಾರ್ಥಿ ರ್ಯಾಲಿ

ನೀಟ್ ಯು.ಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ SSF ಸುಳ್ಯ ಡಿವಿಷನ್ ವತಿಯಿಂದ ವಿದ್ಯಾರ್ಥಿ ರ್ಯಾಲಿ ಗಾಂಧಿನಗರದಿಂದ ಸುಳ್ಯ ಹಳೆ ಬಸ್ ಸ್ಟಾಂಡ್ ತನಕ ಜರಗಿತು. ಸಾರ್ವಜನಿಕ ಪ್ರತಿಭಟನಾ ಸಭೆ ಸುಳ್ಯ ಬಸ್ ನಿಲ್ಡಾಣದಲ್ಲಿ ಮೇ 15ರಂದು ಜರಗಿತು. ಸುಳ್ಯ ತಾಲೂಕು ಸಾಂಘಿಕ, ಸಾಮಾಜಿಕ, ರಾಜಕೀಯ ನಾಯಕರು‌ ಸಭೆಯಲ್ಲಿ ಒಗ್ಗೂಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಗೆ ಕಾರಣವಾಗಿದ್ದು ರಾಷ್ಟ್ರದ 23 ಲಕ್ಷ ವಿದ್ಯಾರ್ಥಿಗಳ ಕನಸುಗಳು ಸಂಕಷ್ಟಕ್ಕೊಳಗಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ರ್ಯಾಲಿ ಅಭಿಪ್ರಾಯಪಟ್ಟಿತ್ತು. SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಬಾಹ್ ಸಖಾಫಿ ಬೀಜಕೊಚ್ಚಿ ದಿಕ್ಸೂಚಿ ಭಾಷಣಗೈದರು. ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಬೆಳ್ಳಾರೆ ವಿದ್ಯಾರ್ಥಿ ರ್ಯಾಲಿಗೆ ನೇತೃತ್ವ ನೀಡಿದರು. KMJ ಸುಳ್ಯ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, SYS ಸುಳ್ಯ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.SYS & KMJ ನಾಯಕರು ವಿದ್ಯಾರ್ಥಿಗಳ ರ್ಯಾಲಿ ಗೆ ಪೂರ್ಣವಾಗಿ ಸಹಕರಿಸಿ ಭಾಗವಹಿಸಿದರು.

m

Related Posts