ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯ ಸುಳ್ಯ ಸುನ್ನೀ ಸೆಂಟರ್ ನಲ್ಲಿ ಸಮಿತಿ ಅಧ್ಯಕ್ಷ ಸಿದ್ದೀಖ್ ಹಿಮಮಿ ಸಖಾಫಿ ಅಧ್ಯಕ್ಷತೆಯಲ್ಲಿ _ರಿಯಾನ್ ಸ ಅದಿ ಬೆಳ್ಳಾರೆ ಉದ್ಘಾಟಿಸಿದರು. ನೌಶಾದ್ ಅಹ್ಸನಿ ಬೆಳ್ಳಾರೆ ದುಆಗೈದರು. ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಹಾಗೂ ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಕಟ್ಟೆಕಾರ್ ಉಪಸ್ಥಿತರಿದ್ದರು.
ಡಿವಿಷನ್ ಸಮಿತಿ ಪ್ರ. ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳ ವಾರ್ಷಿಕ ವರದಿ ಹಾಗೂ ಫಿನಾನ್ಸ್ ಕಾರ್ಯದರ್ಶಿ ಶರೀಫ್ ಜಯನಗರ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ರಶೀದ್ ಮಡಂತ್ಯಾರು ತರಗತಿ ಮಂಡಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಜಾರಿಗೆಬೈಲ್, ಮುಬೀನ್ ಉಜಿರೆ ಹಾಗೂ ಇಸಾಕ್ ಅಳದಂಗಡಿ ಕೌನ್ಸಿಲ್ ವೀಕ್ಷಕರಾಗಿದ್ದರು. ಕಬೀರ್ ಜಟ್ಟಿಪ್ಪಳ್ಳ ಸ್ವಾಗತಿಸಿ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ವಂದಿಸಿದರು.
ನೂತನ ಸಮಿತಿ. ಅಧ್ಯಕ್ಷರು : ರಿಯಾನ್ ಸಅದಿ ಬೆಳ್ಳಾರೆ, ಉಪಾಧ್ಯಕ್ಷರು : ಕಬೀರ್ ಹಿಮಮಿ ಮೇನಾಲ, ಪ್ರಧಾನ ಕಾರ್ಯದರ್ಶಿ : ಶಮೀರ್ ಡಿ.ಹೆಚ್ ಮೊಗರ್ಪಣೆ, ಕೋಶಾಧಿಕಾರಿ : ಸಿದ್ದೀಕ್ ಎಲಿಮಲೆ, ಕಾರ್ಯದರ್ಶಿಗಳು : ಶಿಹಾಬ್ ಫಾಳಿಲಿ (ದಅವಾ), ನೌಶಾದ್ ಅಹ್ಸನಿ (ಮೀಡಿಯಾ), ರಹೀಂ ಹಿಮಮಿ (ರೈನ್ಬೋ), ಶರೀಫ್ ಜಯನಗರ (ಜಿ. ಡಿ), ಬಶೀರ್ ಕಲ್ಲುಮುಟ್ಲು (ಕ್ಯೂ. ಡಿ), ಮಹ್ಶೂಕ್ ಇರುವಂಬಳ್ಳ (ಕ್ಯಾಂಪಸ್) ಸಮಿತಿ ಸದಸ್ಯರು : ಸಾಬಿತ್ ಹಿಕಮಿ ಎಲಿಮಲೆ, ಇರ್ಶಾದ್ ಸಅದಿ, ಆಬಿದ್ ಕಲ್ಲುಮುಟ್ಲು, ನಾಸಿರ್ ಎಲಿಮಲೆ, ಸಲ್ಮಾನ್ ಹಿಮಮಿ ಎಲಿಮಲೆ, ಅಬ್ಬಾಸ್ ಇರುವಂಬಳ್ಳ, ಜಾಫರ್ ಹಾಶಿಮಿ, ಅನಸ್ ಪೈಂಬಚ್ಚಾಲ್ ಹಾಗೂ ಸಾದಿಕ್ ಮಾಸ್ಟರ್ ರವರು ಆಯ್ಕೆಯಾದರು.





m
