ಬೆಳ್ಳಾರೆ:- SSF ಸುಳ್ಯ ಡಿವಿಷನ್ ವತಿಯಿಂದ ರೇಡಿಯನ್ಸ್ ಕ್ಯಾಂಪ್ ಡಿಸೆಂಬರ್ 14 ರಂದು ದಾರುಲ್ ಹಿಕ್ಮಾ ಬೆಳ್ಳಾರೆಯಲ್ಲಿ SSF ಸುಳ್ಯ ಡಿವಿಷನ್ ಅಧ್ಯಕ್ಷರಾದ ರಿಯಾನ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯಿತು, SSF ಸುಳ್ಯ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾದಿಕ್ ಮಾಸ್ಟರ್ ಕಲ್ಲುಗುಂಡಿ ಸರ್ವರನ್ನು ಸ್ವಾಗತಿಸಿದರು.

ಸುನ್ನಿ ಜಂಇಯ್ಯತುಲ್ ಉಲಮಾ ಬೆಳ್ಳಾರೆ ಝೋನ್ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು, SSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮಿಸ್ಬಾಹಿ ರವರು ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಅರ್ಥಗರ್ಭಿತವಾದ ವಿಷಯ ಮಂಡಿಸಿದರು, ಕಾರ್ಯಕ್ರಮದಲ್ಲಿ SSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಯಾಝ್ ಎಲಿಮಲೆ, ದಾರುಲ್ ಹಿಕ್ಮಾ ಸಾರಥಿ ದಾವೂದ್ ಸಅದಿ, ಸತ್ತಾರ್ ಸಖಾಫಿ, ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SJM ರಾಜ್ಯ ಸಮಿತಿಯ ಮುಅಲ್ಲಿಂ ಅವಾರ್ಡ್ ಸ್ವೀಕರಿಸಿದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಸಾಹಿತ್ಯೋತ್ಸವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಡಿವಿಷನ್ ವ್ಯಾಪ್ತಿಯ ಪ್ರತಿಭೆಗಳನ್ನು ಸನ್ಮಾನಿಸಲಾಯಿತು, ಡಿವಿಷನ್ ವ್ಯಾಪ್ತಿಯಲ್ಲಿ ಬರುವ ನೂರರಷ್ಟು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
