ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್‌ಸ್ಆಪ್ ತನ್ನ ಉಪಯೋಗ್ತಾಗಳಿಗಾಗಿ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ‘ಕ್ಲೋಸ್ ಫ್ರೆಂಡ್ಸ್ ಸ್ಟೇಟಸ್ ಲಿಸ್ಟ್’ (Close Friends Status List) ಎಂಬ ಈ ಹೊಸ ಫೀಚರ್ ಮೂಲಕ, ಬಳಕೆದಾರರು ತಮ್ಮ ಆಯ್ಕೆಯ ಕೆಲವೇ ಗೆಳೆಯರೊಂದಿಗೆ ಸ್ಟೇಟಸ್ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ.
ಪ್ರಸ್ತುತ ಈ ಸೌಲಭ್ಯವನ್ನು ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗಾಗಿ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಒದಗಿಸಲಾಗಿದೆ. ಈ ವೈಶಿಷ್ಟ್ಯ ಬಳಸಿ, ಬಳಕೆದಾರರು ಸ್ಟೇಟಸ್ ಸ್ಕ್ರೀನ್‌ನಲ್ಲೇ ತಮ್ಮದೇ ಆದ ‘ಕ್ಲೋಸ್ ಫ್ರೆಂಡ್ಸ್’ ಪಟ್ಟಿಯನ್ನು ರಚಿಸಿ, ಅದನ್ನು ಬೇಕಾದಾಗ ಸಂಪಾದಿಸಬಹುದಾಗಿದೆ.
ಪ್ರತಿ ಬಾರಿ ಸ್ಟೇಟಸ್ ಹಂಚಿಕೊಳ್ಳುವಾಗ ಖಾಸಗಿತನದ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಅವಶ್ಯಕತೆ ಇಲ್ಲದಿರುವುದು ಇದರ ಪ್ರಮುಖ ವಿಶೇಷತೆಯಾಗಿದೆ. ಬಳಕೆದಾರರು ಆಯ್ಕೆ ಮಾಡಿದ ವ್ಯಕ್ತಿಗಳಿಗೆ ಮಾತ್ರ ಆ ಸ್ಟೇಟಸ್ ವೀಕ್ಷಿಸಲು ಅವಕಾಶ ದೊರೆಯಲಿದೆ.
ಇದಲ್ಲದೆ, ಈ ಪಟ್ಟಿಯಲ್ಲಿ ಯಾರನ್ನಾದರೂ ಸೇರಿಸುವುದು ಅಥವಾ ತೆಗೆದುಹಾಕುವುದರ ಬಗ್ಗೆ ಸಂಬಂಧಿಸಿದವರಿಗೆ ವಾಟ್‌ಸ್ಆಪ್ ಯಾವುದೇ ಸೂಚನೆ ನೀಡುವುದಿಲ್ಲ ಎನ್ನುವುದು ಗಮನಾರ್ಹವಾಗಿದೆ.
ಖಾಸಗಿತನ ಮತ್ತು ವೈಯಕ್ತಿಕ ಹಂಚಿಕೆಗೆ ಹೆಚ್ಚಿನ ಆದ್ಯತೆ ನೀಡುವ ಬಳಕೆದಾರರಿಗೆ ಈ ಹೊಸ ವೈಶಿಷ್ಟ್ಯ ಉಪಯುಕ್ತವಾಗಲಿದೆ ಎಂದು ತಂತ್ರಜ್ಞಾನ ವಲಯದವರು ಅಭಿಪ್ರಾಯಪಟ್ಟಿದ್ದಾರೆ.





m
