Featured, ಇತರೆ, ಸ್ಥಳೀಯ

ಬಂಟ್ವಾಳ : ಮಾಣಿ ಸಮೀಪ ಸೂರಿಕುಮೇರು ಬಳಿ ಸ್ಕೂಟಿ–ಲಾರಿ ಅಪಘಾತ : ಸುಳ್ಯ ನಿವಾಸಿ ಮೃತ್ಯು

ಬಂಟ್ವಾಳ, ಮೇ 25: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಸೋಮವಾರ ಸ್ಕೂಟಿ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಳ್ಯ ನಿವಾಸಿ ಕಲಂದರ್ ಶಾ ಮೃತಪಟ್ಟಿದ್ದಾರೆ.
ಸುಳ್ಯದ ವೈಟ್ ಮೊಯಿದು ಅವರ ಪುತ್ರ ಕಲಂದರ್ ಶಾ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಸೂರಿಕುಮೇರು ಬಳಿ ಲಾರಿಯೊಂದಿಗೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ಪರಿಣಾಮ ಕಲಂದರ್ ಶಾ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆ ಸಾಗಿಸುವ ವೇಳೆ ಮೃತ್ಯ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಮೃತ  ಕಲಂದರ್ ಶಾ ಅವರು ಪತ್ನಿ, ಇಬ್ಬರು ಪುತ್ರಿಯರು, ತಂದೆ, ಸಹೋದರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

m

Related Posts