ತ್ರಿಶೂರ್/ಬೆಂಗಳೂರು, ಮೇ 26: ಮಾದಕ ವಸ್ತುಗಳ ವಿರುದ್ಧ ಕೇರಳ ನೂತನ ಸರಕಾರದ ಗೃಹ ಮಂತ್ರಿ ರಮೇಶ್ ಚೆನ್ನಿತಲ್ಲ ನೇತೃತ್ವದಲ್ಲಿ ಘೋಷಿಸಲಾದ ‘ಆಪರೇಷನ್ ತೂಫಾನ್’ ಅಭಿಯಾನದ ಮೊದಲ ಯಶಸ್ಸಾಗಿ, ಬೆಂಗಳೂರು ನಿಂದ ತ್ರಿಶೂರ್ ಗೆ ತೆರಳುತ್ತಿದ್ದ ಅಂಬುಲೆನ್ಸ್‌ನಲ್ಲಿದ್ದ 250 ಗ್ರಾಂ MDMA ಅನ್ನು ಕೇರಳ ಪೋಲಿಸ್ ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದೆ.
ಬಂಧಿತರು ಅಂಬುಲೆನ್ಸ್ ಮೂಲಕ ಮಾದಕ ವಸ್ತು ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಮಾದಕ ವಸ್ತು ಸಾಗಾಣಿಕೆಗೆಂದೇ ಅಂಬುಲೆನ್ಸ್ ಬೆಂಗಳೂರು ತೆರಳಿ ಮರಳುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಮಾದಕ ವಸ್ತುಗಳ ಜಾಲವನ್ನು ಬೇರು ಸಮೇತ ನಿರ್ಮೂಲನೆ ಮಾಡುವ ಉದ್ದೇಶದಿಂದ ‘ಆಪರೇಷನ್ ತೂಫಾನ್’ ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಬೇಟೆ ಇದಾಗಿದ್ದು, ಈ ಯಶಸ್ವಿ ಕಾರ್ಯಾಚರಣೆಗೆ ಗೃಹ ಮಂತ್ರಿ ರಮೇಶ್ ಚೆನ್ನಿತಲ್ಲ ಅವರು ಪೊಲೀಸ್ ಇಲಾಖೆಯನ್ನು ಅಭಿನಂದಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.





m
