Featured, ಇತರೆ, ಸ್ಥಳೀಯ

ಸುಳ್ಯ: ಅಸೌಖ್ಯದಿಂದ ಪ್ರೇಮಾ ಜಟ್ಟಿಪಳ್ಳ ನಿಧನ

ಸುಳ್ಯ, ಜೂ. 10: ಸುಳ್ಯ ಜಟ್ಟಿಪಳ್ಳ ನಿವಾಸಿ, ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮಾ (41) ಅವರು ಅಸೌಖ್ಯದ ಕಾರಣದಿಂದ ಬುಧವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಅವರು ಇತ್ತೀಚಿನ ದಿನಗಳಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಪ್ರೇಮಾ ಅವರು ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಜಟ್ಟಿಪಳ್ಳ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮೃತರು ಪತಿ, ಸುಳ್ಯ ನಗರ ಪಂಚಾಯತ್‌ನ ಮಾಜಿ ಸದಸ್ಯ ನಾರಾಯಣ ಜಟ್ಟಿಪಳ್ಳ, ಪುತ್ರಿಯರಾದ ಗ್ರೀಷ್ಮ ಹಾಗೂ ಜಶ್ಮಿತಾ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವಿವಿಧ ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

m

Related Posts