Featured, ಇತರೆ, ಸ್ಥಳೀಯ

ಮುರೂರು ಮಿಸ್ಬಾಹುಲ್ ಉಲೂಮ್ ಸೆಕೆಂಡರಿ ಮದ್ರಸದಲ್ಲಿ ಸಾಹಿತ್ಯ ಸಮಾಜ ರಚನೆ

ಮುರೂರು, ಜೂ. 7: ಮುರೂರು ಮಿಸ್ಬಾಹುಲ್ ಉಲೂಮ್ ಸೆಕೆಂಡರಿ ಮದ್ರಸದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸಾಹಿತ್ಯ ಸಮಾಜದ ರೂಪೀಕರಣ ಸಭೆಯು ಜೂನ್ 7ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸದರ್ ಮುಅಲ್ಲಿಮ್ ಮುಹಮ್ಮದ್ ಹನೀಫ್ ಫಾಳಿಲಿ ಹಾಕತೂರ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಹಿತ್ಯ ಸಮಾಜದ ಮಹತ್ವ, ಉದ್ದೇಶಗಳು ಹಾಗೂ ವಿದ್ಯಾರ್ಥಿಗಳ ಪ್ರತಿಭಾ ವಿಕಸನದಲ್ಲಿ ಅದರ ಪಾತ್ರದ ಕುರಿತು ಚರ್ಚೆ ನಡೆಯಿತು.

ಬಳಿಕ 2026-27ನೇ ಸಾಲಿನ ನೂತನ ಸಾಹಿತ್ಯ ಸಮಾಜ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ನಸೀಮ್ ಜೆ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ಹಾಗೂ ಖಜಾಂಜಿಯಾಗಿ ಮುಹಮ್ಮದ್ ಸಫ್ವಾನ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅಬ್ದುಲ್ ಸಿಂಸಾರ್ ಮತ್ತು ಎಸ್.ಎಂ. ಹಝ್ ಹನೀನ್, ಜಂಟಿ ಕಾರ್ಯದರ್ಶಿಗಳಾಗಿ ಅಹ್ಮದ್ ಮುರ್ಶಿದ್, ಮುಹಮ್ಮದ್ ಲಬೀಬ್ ಹಾಗೂ ಮುಹಮ್ಮದ್ ಫಯಾಜ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಾಪಕರಾದ ವಫೀಕ್ ಸುಲ್ತಾನಿ ಉಸ್ತಾದರು ಸಾಹಿತ್ಯ ಸಮಾಜದ ಕಾರ್ಯಚಟುವಟಿಕೆಗಳು, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಅಗತ್ಯತೆ ಹಾಗೂ ಸಂಘಟನೆಯ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಮದ್ರಸದ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

m

Related Posts