Featured, ಇತರೆ, ಸ್ಥಳೀಯ

ಸಂಪಾಜೆ : ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಮುಅಲ್ಲಿಂ ಡೇ ಆಚರಣೆ

ಸಂಪಾಜೆ, ಜೂನ್ 14: ಸಂಪಾಜೆಯ ನೂರುಲ್ ಹುದಾ ಮದ್ರಸದಲ್ಲಿ “ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಮುಅಲ್ಲಿಂ ಡೇ ಆಚರಣೆ” ಕಾರ್ಯಕ್ರಮವು ಜೂನ್ 14ರಂದು ಮದರಸ ಹಾಲ್ ನಲ್ಲಿ ಜರಗಿತು

ಈ ಸಂದರ್ಭದಲ್ಲಿ ಸ್ಥಳೀಯ ಖತೀಬರಾದ ಲುಖ್ಮಾನುಲ್ ಹಕೀಂ ಫೈಝಿ ಅಲ್ ಮಅ್‌ಬರಿ ಅವರು ಮುಅಲ್ಲಿಮರ ಮಹತ್ವ, ಶಿಕ್ಷಣ ಕ್ಷೇತ್ರದಲ್ಲಿ ಅವರ ತ್ಯಾಗ ಹಾಗೂ ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರದ ಕುರಿತು ಅರ್ಥಪೂರ್ಣ ಸಂದೇಶ ನೀಡಿದರು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಮುಅಲ್ಲಿಮರ ಪರಿಶ್ರಮ ಮತ್ತು ಮಾರ್ಗದರ್ಶನವೇ ಪ್ರಮುಖ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು

ಬಳಿಕ ಮದ್ರಸದಲ್ಲಿ ಅಳವಡಿಸಲಾದ ನೂತನ ಸ್ಮಾರ್ಟ್ ಪ್ಯಾನಲ್ ಅನ್ನು ಜಮಾಅತ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹಮೀದಿಯಾ ಅವರು ಅಧಿಕೃತವಾಗಿ ಉದ್ಘಾಟಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಧಾರ್ಮಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಪ್ರಯತ್ನವು ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟ ಅವರು, ಮದ್ರಸದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಉಪಾಧ್ಯಕ್ಷರಾದ ಇಸ್ಮಾಈಲ್ ಸಿ.ಎಸ್. ಅವರು ಕೊಡುಗೆಯಾಗಿ ನೀಡಿದ ಪ್ರಿಂಟರ್ ಅನ್ನು ಮದ್ರಸಕ್ಕೆ ಹಸ್ತಾಂತರಿಸಲಾಯಿತು. ಜೊತೆಗೆ ಜಮಾಅತ್ ಸಮಿತಿ ವತಿಯಿಂದ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಉಸ್ತಾದರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಅಧ್ಯಾಪಕರಾದ ಆರಿಫ್ ಫೈಝಿ ಅಲ್ ಮಅ್‌ಬರಿ, ಜಮಾಅತ್ ಸಮಿತಿ ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಪಿ., ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಿ.ಪಿ., ಜಮಾಅತ್ ಪದಾಧಿಕಾರಿಗಳು, ಗಲ್ಫ್ ಸಮಿತಿ ಸದಸ್ಯರು, ಮದ್ರಸದ ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

m

Related Posts