Featured, ಇತರೆ, ಸ್ಥಳೀಯ

ಪಾಸ್‌ಪೋರ್ಟ್ ಶುಲ್ಕದಲ್ಲಿ ಭಾರೀ ಏರಿಕೆ: ಜುಲೈ 1 ರಿಂದ ಹೊಸ ದರಗಳು ಜಾರಿ

ನವದೆಹಲಿ, ಜೂನ್ 25: ಕೇಂದ್ರ ಸರ್ಕಾರ ಪೆಟ್ರೋಲ್, ಅಡುಗೆ ಅನಿಲ (ಗ್ಯಾಸ್) ಸೇರಿದಂತೆ ವಿವಿಧ ಸೇವೆಗಳ ದರ ಏರಿಕೆಯ ಬಳಿಕ ಇದೀಗ ಪಾಸ್‌ಪೋರ್ಟ್ ಶುಲ್ಕವನ್ನೂ ಗಣನೀಯವಾಗಿ ಹೆಚ್ಚಿಸಿದೆ. ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ತಿಳಿದುಬಂದಿದೆ.

ಪ್ರಸ್ತುತ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್‌ಗೆ ಸರ್ಕಾರ ವಿಧಿಸುತ್ತಿರುವ ಶುಲ್ಕ ₹1,500 ಆಗಿದ್ದು, ಹೊಸ ತಿದ್ದುಪಡಿ ಪ್ರಕಾರ ಇದನ್ನು ₹2,500ಕ್ಕೆ ಏರಿಸಲಾಗಿದೆ. ಅಂದರೆ ಪ್ರತಿ ಅರ್ಜಿಗೆ ₹1,000 ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಶುಲ್ಕ ಏರಿಕೆಯಿಂದ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಹಾಗೂ ನವೀಕರಣ (Renewal) ಮಾಡಿಸಿಕೊಳ್ಳುವವರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವು ವಲಯಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ, ಹಳೆಯ ಶುಲ್ಕದ ಪ್ರಯೋಜನ ಪಡೆಯಲು ಆಸಕ್ತರು ಅದಕ್ಕೂ ಮುನ್ನ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಹೊಸ ಶುಲ್ಕದ ಪಟ್ಟಿ ಹೀಗಿದೆ

36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್: ಈ ಹಿಂದೆ ಇದ್ದ ₹1,500 ದರವನ್ನು ಈಗ ₹2,500 ಕ್ಕೆ ಹೆಚ್ಚಿಸಲಾಗಿದೆ ತತ್ಕಾಲ್ ಸೇವೆಗೆ ₹5,000 ನಿಗದಿಪಡಿಸಲಾಗಿದೆ

60 ಪುಟಗಳ ಜಂಬೋ ಪಾಸ್‌ಪೋರ್ಟ್: ಸಾಮಾನ್ಯ ಸೇವೆಗೆ ₹3,500 ಹಾಗೂ ತತ್ಕಾಲ್ ಸೇವೆಗೆ ₹6,000 ಶುಲ್ಕ ಇರಲಿದೆ
ಅಪ್ರಾಪ್ತರು (15 ವರ್ಷದೊಳಗಿನ ಮಕ್ಕಳು): 36 ಪುಟಗಳ ಪಾಸ್‌ಪೋರ್ಟ್‌ಗೆ ಸಾಮಾನ್ಯ ವಿಭಾಗದಲ್ಲಿ ₹1,750 ಮತ್ತು ತತ್ಕಾಲ್‌ನಲ್ಲಿ ₹4,250 ಶುಲ್ಕ ಇರಲಿದೆ

ಕಳೆದುಹೋದ/ಹಾನಿಗೊಳಗಾದ ಪಾಸ್‌ಪೋರ್ಟ್: ಹೊಸದಾಗಿ ಪಡೆಯಲು ಸಾಮಾನ್ಯ ವಿಭಾಗದಲ್ಲಿ ₹4,250 ಮತ್ತು ತತ್ಕಾಲ್‌ನಲ್ಲಿ ₹6,750 ಪಾವತಿಸಬೇಕಾಗುತ್ತದೆ

ಇತರ ಸೇವೆಗಳ ದರ

ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಶುಲ್ಕವನ್ನು ₹750 ಕ್ಕೆ ಹಾಗೂ ವಿಳಾಸ, ಹೆಸರು ಬದಲಾವಣೆ ಅಥವಾ ECR ತಿದ್ದುಪಡಿಗಳ ಶುಲ್ಕವನ್ನು ₹1,500 ಕ್ಕೆ ಪರಿಷ್ಕರಿಸಲಾಗಿದೆ

ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ರಿಯಾಯಿತಿ

ಈ ಹೊಸ ನಿಯಮದಲ್ಲೂ ಸರ್ಕಾರವು ಒಂದು ಸಮಾಧಾನಕರ ನಿರ್ಧಾರವನ್ನು ಉಳಿಸಿಕೊಂಡಿದೆ. 8 ವರ್ಷದೊಳಗಿನ ಮಕ್ಕಳಿಗೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೊಸ ಪಾಸ್‌ಪೋರ್ಟ್ ಶುಲ್ಕದಲ್ಲಿ ಶೇಕಡಾ 10 ರಷ್ಟು (10%) ವಿನಾಯಿತಿ ಮುಂದುವರಿಯಲಿದೆ ಪಾಸ್‌ಪೋರ್ಟ್‌ (ತಿದ್ದುಪಡಿ) ನಿಯಮಗಳು, 2026′ ರ ಅಡಿಯಲ್ಲಿ ಕೇಂದ್ರ ಸರ್ಕಾರವು ಹೊಸ ಗಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದು, ಪರಿಷ್ಕೃತ ದರಗಳು ಮುಂಬರುವ ಜುಲೈ 1, 2026 ರಿಂದ ಅಧಿಕೃತವಾಗಿ ದೇಶಾದ್ಯಂತ ಜಾರಿಗೆ ಬರಲಿವೆ

m

Related Posts