ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಬಗ್ಗೆ ಮಾಹಿತಿ ಅಭಿಯಾನದ ಅಂಗವಾಗಿ ಸವಣೂರು ಗ್ರಾಮದ ಬೂತ್ ಸಂಖ್ಯೆ–76 ಹಾಗೂ ಕೊಣಾಲು ಗ್ರಾಮದ ಬೂತ್ ಸಂಖ್ಯೆ–17ರಲ್ಲಿ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಮಂಡಲ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೆರಿಯಡ್ಕ, BLA-1 ಹರೀಶ್ ಕಂಜಿಪಿಲಿ, ಪ್ರಮುಖರಾದ ಸುರೇಶ್ ದೆಂತಾರು, ರವಿಪ್ರಸಾದ್ ಶೆಟ್ಟಿ, ರಾಮಚಂದ್ರ ಏಣಿತಡ್ಕ, ವಸಂತ ನಡುಬೈಲು, ಕುಶಾಲಪ್ಪ ಗೌಡ, ಅನಿಲ್, ದಿನೇಶ್ ಮೇದು, ಬಾಲಕೃಷ್ಣ ಬಾಣಾಜಾಲು, ತಾರನಾಥ ಕಾಯರ್ಗ, ಸುರೇಶ್ ಸೂಡಿಮುಳ್ಳು, ಸತೀಶ್, ಚೇತನ್, ಮಹೇಶ್ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





m

