Featured, ಇತರೆ, ಸ್ಥಳೀಯ

ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ನಿಷ್ಪಕ್ಷಪಾತ ತನಿಖೆಗೆ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ (ರಿ) ಗೂನಡ್ಕ ಒತ್ತಾಯ

ಕಲ್ಲುಗುಂಡಿಯ ಕಡೆಪಾಲ ಆಲಿ ಗುಡ್ಡೆಯಲ್ಲಿ ನಡೆದ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ವಿಧಿಸಿ,ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿನ ಗೊಂದಲಕ್ಕೆ ತೆರೆ ಎಳೆಯಲು ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ರಿ ಗೂನಡ್ಕ ಒತ್ತಾಯ ಮಾಡಲಾಗುತ್ತದೆ  ಪ್ರಸ್ತುತ ಘಟನೆಯು ಖೇದಕರ ವಾಗಿದ್ದು,ಇಂತಹ ದುರ್ಘಟನೆಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾಗಿದೆ

ಹೆಣ್ಣು ಮಕ್ಕಳು ಅಮೂಲ್ಯ ಸಂಪತ್ತು ಅವರ ಪಾಲನೆ ಪೋಷಣೆ ಮತ್ತು ರಕ್ಷಣೆ ಸರ್ವರ ಪಾಲಿನ ಕರ್ತವ್ಯ ಯಾವುದೇ ಸಂದಿಗ್ಧ ಸ್ಥಿತಿಯಲ್ಲಿ ದುಡುಕಿನ ನಿರ್ಧಾರ ಕೈ ಗೊಳ್ಳದೇ ಮಾತುಕತೆಗಳ ಮೂಲಕ ಅಥವಾ ಕಾನೂನು ಪಾಲನೆಯ ಪರಿಹಾರ ಮಾರ್ಗವನ್ನು ಅನುಸರಿಸಬೇಕು

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ ಬಿ ಸಿ ರೋಡ್  ನಲ್ಲಿ ನಡೆದ ಘಟನೆ ಇದಕ್ಕೊಂದು ಉದಾಹರಣೆ ಮಾತ್ರ ತಪ್ಪಿತಸ್ಥರಿಗೆ ಅರ್ಹವಾದ ಶಿಕ್ಷೆ ದೊರಕದಿರುವುದು ಇಂತಹ ನಿರಂತರ ಅನಾಹುತಗಳಿಗೆ ಕಾರಣವಾಗಬಹುದು

ಸರ್ವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್( ರಿ) ಗೂನಡ್ಕ ಸಂಘಟನೆ ಸಂಬಂಧಪಟ್ಟ ಅಧಿಕಾರಿಗಳನ್ನು ಪತ್ರಿಕಾ ವರದಿ ಮೂಲಕ ಆಗ್ರಹಪಡಿಸುತ್ತಿದೆ

m

Related Posts