ಇತರೆ, ಸ್ಥಳೀಯ

ಕೋಲ್ಚಾರು ಅಯುಷ್ಮಾನ್ ಅರೋಗ್ಯ ಮಂದಿರ ಕಟ್ಟಡಕ್ಕೆ ರಾಜ್ಯ ಸರಕಾರದಿಂದ ರೂಪಾಯಿ 65 ಲಕ್ಷ ಅನುದಾನ ಬಿಡುಗಡೆ

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಯುಷ್ಮಾನ್ ಅರೋಗ್ಯ ಮಂದಿರ ತೆರೆಯಲು ರಾಜ್ಯ ಸಚಿವ ಸಂಪುಟ ಪ್ರಕರಣ ಸಂಖ್ಯೆ ಸಿ945/2025 ದಿನಾಂಕ 27/11/2025 ರ ನಿರ್ಣಯದಂತೆ 15ನೇ ಹಣಕಾಸು ಯೋಜನೆ ಅಡಿ ರಾಜ್ಯದಲ್ಲಿ 167 ಅರೋಗ್ಯ ಮಂದಿರ ತೆರೆಯಲು ಸರಕಾರದ ಆದೇಶ ಸಂಖ್ಯೆ ಆಕುಕ 208ಸಿಜೆಎಂ 2025 ದಿನಾಂಕ 4/12/2025 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಸರಕಾರದ ಆದೇಶ ಸಂಖ್ಯೆ ಆಕುಕ 208 ಸಿಜೆಎಂ 2025 ಬೆಂಗಳೂರು, ದಿನಾಂಕ 27/3/2026 ರಂತೆ ಕ್ರಮ ಸಂಖ್ಯೆ 10 ರಂತೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೋಲ್ಚಾರು ಎಂಬಲ್ಲಿ ಅಯುಷ್ಮಾನ್ ಅರೋಗ್ಯ ಮಂದಿರ ನಿರ್ಮಾಣಕ್ಕೆ ರೂಪಾಯಿ 65 ಲಕ್ಷ ಅನುದಾನ ಮಂಜೂರುಗೊಂಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಈ ಹಿಂದೆ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಅಯುಷ್ಮಾನ್ ಅರೋಗ್ಯ ಮಂದಿರದ ಕಟ್ಟಡ ನಿರ್ಮಾಣಕ್ಕೆ ಶೀಲಾನ್ಯಾಸ ನೆರವೇರಿಸಿದ್ದರು. ಪ್ರಸ್ತುತ ಅರೋಗ್ಯ ಕೇಂದ್ರಕ್ಕೆ ಕಾದಿರಿಸಿದ ಸ್ಥಳ 0.05 ಎಕ್ರೆ ಸ್ಥಳವು ಸುಮಾರು 50 ವರ್ಷಗಳಿಂದ ಮೇಲ್ಪಟ್ಟು ದಿವಂಗತ ರಾಮಕೃಷ್ಣ ಗೌಡರವರ ಸ್ವಾಧೀನವಿದ್ದು, ಸ್ವಾಧೀನದಾರರ ಗಮನಕ್ಕೆ ಬಾರದೆ ಗಡಿ ಗುರುತು ಮಾಡಲು ಇಲಾಖೆಯವರು ಪ್ರಯತ್ನಸಿದಾಗ ವಿವಾದವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಇವರ ಸೂಚನೆಯ ಮೇರೆಗೆ ಡಿ ಹೆಚ್ ಒ, ಟಿ ಹೆಚ್ ಒ ಮತ್ತು ಸುಳ್ಯ ತಾಲೂಕು ತಹಸೀಲ್ದಾರರ ಸಮ್ಮುಖದಲ್ಲಿ ಸ್ಥಳದ ಸ್ವಾಧೀನದಾರರದ ಸೋಮಶೇಖರ ಕೊಯಿಂಗಾಜೆ, ಹರೀಶ್ ಕೊಯಿಂಗಾಜೆ, ಸತೀಶ್ ಕೊಯಿಂಗಾಜೆ ಇದ್ದು ಸಮಸ್ಯೆಯನ್ನು ಇತ್ಯಾರ್ಥಪಡಿಸಿ ಕಂದಾಯ ಇಲಾಖೆ ಮುಖಂತಾರ ಗಡಿ ಗುರುತಿಸಿದಾಗ ಕಾದಿರಿಸಿದ ಸ್ಥಳದಲ್ಲಿ ಅರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಕಷ್ಟ ಸಾಧ್ಯವೆಂದು ಗುತ್ತಿಗೆದಾರರು ತಿಳಿಸಿದಾಗ 0.05 ಎಕ್ರೆ ಸ್ಥಳವನ್ನು ಹೆಚ್ಚುವರಿಯಾಗಿ ಬಿಟ್ಟು ಕೊಟ್ಟು ಇದೀಗಲೇ ಕಾಮಗಾರಿ ಪ್ರಾರಂಭಗೊಂಡಿದ್ದು ಈ ವರ್ಷದಲ್ಲೇ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿರುತ್ತಾರೆ ಎಂದು ಅಲೆಟ್ಟಿ ಗ್ರಾಮ ಸಮಿತಿ ಅಧ್ಯಕ್ಷರಾದ ಸತ್ಯಕುಮಾರ್ ಅಡಿಂಜಾ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
m