ಸುಳ್ಯ, ಸೆ.13: ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಇದರ ಜಂಟಿ ಆಶ್ರಯದಲ್ಲಿ, ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಭಾನುವಾರ ಸುಣ್ಣಮೂಲೆಯಲ್ಲಿ ಯಶಸ್ವಿಯಾಗಿ ನಡೆಯಿತು.ಬಹುಮಾನ್ಯ ಸ್ವಾಲಿಹ್ ಹನೀಫಿ ಉಸ್ತಾದ್ ಅವರ ದುಆದೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಸಮಾಜದ ವಿವಿಧ ವರ್ಗಗಳ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು, ಒಟ್ಟು 35 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ರಕ್ತದಾನ ಪ್ರಕ್ರಿಯೆಗೆ ಉತ್ತಮ ಸಹಕಾರ ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಸಸ್ ಹೆಲ್ಪ್ ಲೈನ್ ಅಧ್ಯಕ್ಷ ಹಸನ್ ಗೌಸಿಯಾ ವಹಿಸಿದ್ದರು. ಯುವ ವಕೀಲ ಪಾವಾಜ್ ಕನಕಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸುಳ್ಯ ಸಭಾಪತಿ ಸುಧಾಕರ್ ರೈ, “ರಕ್ತದಾನದಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು. ಇದೇ ವೇಳೆ ಸಕ್ಸಸ್ ಹೆಲ್ಪ್ ಲೈನ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಅಥಿತಿ ಗಳಾಗಿ ಭಾರತೀಯ ರೆಡ್ ಕ್ರಾಸ್ ಉಪ ಸಭಾಪತಿ ಮುಸ್ತಫಾ ಜನತ ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ ಇಬ್ರಾಹಿಂ ಕಾಸಿಂ,ಅಡ್ಕಾರ್ ದೇವಸ್ಥಾನ ಸಮೀತಿ ಸದಸ್ಯರಾದ ಹೇಮ ಚಂದ್ರ ಕುತ್ಯಾಳ,ಅಹ್ಮದ್ ಬದವಿ ಮಸೀದಿ ಅಧ್ಯಕ್ಷರಾದ ಬಾಪು ಪಿ ,ಆತ್ಮ ರಾಮ ಭಜನಾ ಮಂದಿರ ಕನಕಮಜಲು ಸದಸ್ಯರಾದ ವಿಜಯ ಕುಮಾರ್ ನರಿಯೂರು, ಡಿಗ್ನಿಟಿ ಗ್ರೂಪ್ ಮಾಲಕರಾದ ಬಾತಿಷಾ ಕೆ ,ಪೂಪಿ ಸ್ವಾಪ್ಟ್ ಡ್ರಿಂಕ್ಸ್ ಮಾಲಕರಾದ ಅಬೂಬಕ್ಕರ್ ಪೂಪಿ,ಶರೀಫ್ AK ,ಕನಕಮಜಲು ಯುವಕ ಮಂಡಲ ಅಧ್ಯಕ್ಷರಾದ ಅಶ್ವಥ್ ಅಡ್ಕಾರ್, ಅನ್ಸಾರ್ ಮುಸ್ಲಿಮೀನ್ ಸುಳ್ಯ ಇದರ ಅಧ್ಯಕ್ಷರಾದ ಕೆಬಿ ಇಬ್ರಾಹಿಂ ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ನಿರ್ವಾಹಕರಾದ ಇಕ್ಬಾಲ್ ಕನಕಮಜಲು ,ಇಫಾಜ್ ಬನ್ನೂರು ರಫೀಕ್ ಕೆಮ್ಮಾಯಿ ಹಾಗೂ ಸಕ್ಸಸ್ ಹೆಲ್ಪ್ ಲೈನ್ ಪ್ರಮುಖರಾದ ಮಜೀದ್ ಏಕೆ ,ಹಕೀಮ್ ಬಿಕೆ ,ರಫೀಕ್ ಮೂಲೆ ,ಹುಸೈನ್ ಗೌಸಿಯಾ ,ಅಶ್ರಫ್ ಕೆಬಿ .ಅಬ್ದುಲ್ ರಹಿಮಾನ್ ಟಿಎಮ್ ,ಲತೀಫ್ ಪಿಎ .ರಜಾಕ್ ಪಿ ,ಸಾದಿಕ್ ಕಂಚೆಲ್ಪಾಡಿ ,ಅಬೂಬಕ್ಕರ್ ಏಕೆ ,ಉಮ್ಮರ್ ಬಿಕೆ ,ರಶೀದ್ ಮೂಲೆ ,ಇಬ್ರಾಹಿಂ ಬಿಕೆ ಹಾಗು ಹಲವು ಸದಸ್ಯರು ಉಪಸ್ಥಿತರಿದ್ದರು.
ಸಕ್ಸಸ್ ಹೆಲ್ಪ್ ಲೈನ್ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಸುಣ್ಣಮೂಲೆ ಸ್ವಾಗತಿಸಿ ,ಸಂಸ್ಥೆಯ ಸಲಹಾ ಸದಸ್ಯರಾದ ಹಮೀದ್ ಗೌಸಿಯಾ ವಂದಿಸಿ ,ಕಾರ್ಯಕ್ರಮವನ್ನು ನಿರೂಪಿಸಿದರು.


