ಇತರೆ

ಗಲ್ಫ್ ವೆಲ್ಫೇರ್ ಎಸೋಸಿಯೇಶನ್ ಪೆರಾಜೆ: ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಷೇತ್ರದ ಹೋರಾಟಗಾರರಿಗೂ ಸನ್ಮಾನ ಮತ್ತು ಮೋಟಿವೇಷನ್ ಕ್ಲಾಸ್

ಪೆರಾಜೆ: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಗಲ್ಫ್ ವೆಲ್‌ಫೇರ್ ಅಸೋಸಿಯೇಷನ್, ಪೆರಾಜೆ ವತಿಯಿಂದ ಸನ್ಮಾನ ಕಾರ್ಯಕ್ರಮವು ಇಂದು ಪೆರಾಜೆ ಹಮೀದ್ ಎಂ ಐ ರವರ ನಿವಾಸದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಮದರಸ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪೆರಾಜೆ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡಲಾಯಿತು.


ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಪ್ರೋತ್ಸಾಹ, ಸಾಮಾಜಿಕ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಉನೈಸ್ ಪೆರಾಜೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವವನ್ನು ಸಾರುವ ಹಾಗೂ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಅಭಿಯಾನಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಅವರ ಸೇವೆಯನ್ನು ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಶಿಕ್ಷಣವು ವ್ಯಕ್ತಿಯ ಹಾಗೂ ಸಮಾಜದ ಪ್ರಗತಿಗೆ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ಕರೆ ನೀಡಿದರು. ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ವ್ಯಕ್ತಿತ್ವ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನೂ ಒತ್ತಿ ಹೇಳಿದರು.

       ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ. ತರಗತಿಯನ್ನು ಮುಈನುದ್ದೀನ್ ಫೈಝಿ ಪೈಂಬಚ್ಚಲ್ ನಡೆಸಿಕೊಟ್ಟರು.

  ಪೆರಾಜೆ ಖತೀಬ್ ಉಸ್ತಾದರಾದ ಬನಾರಿ ಯೂಸುಫ್ ಸಖಾಫಿ, ಮುಹಿಯದ್ದೀನ್ ಲತೀಫಿ, ಅಶ್ರಫ್ ಅಹ್ಸನಿ, ಇಸ್ಮಾಯಿಲ್ ಅಹ್ಸನಿ ಉಸ್ತಾದರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

     ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸುವುದರ ಜೊತೆಗೆ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗೌರವಿಸುವ ಮೂಲಕ ಗಲ್ಫ್ ವೆಲ್‌ಫೇರ್ ಅಸೋಸಿಯೇಷನ್‌ನ ಈ ಕಾರ್ಯಕ್ರಮವು ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಉತ್ತೇಜನ ನೀಡಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

ಕಾರ್ಯಕ್ರಮದ ಯಶಸ್ವಿಗಾಗಿ ಊರಿನಲ್ಲಿ ಇರುವ ಪ್ರವಾಸಿ ಸಹೋದರರಾದ ಹಮೀದ್ ಎಂಐ, ಶಂಸುದ್ದೀನ್ ಮುಸ್ಲಿಯಾರ್, ಸಲಾಂ ಕಡಮಕ್ಕಲ್ , ತೌಫೀರ್, ನವಾಝ್, ಆರಿಸ್ ಆಚು , ಸಹದ್ ಹಾಗೂ ಹಲವಾರು ಯುವಕರು ಸಹಕರಿಸಿದರು. ಹಾಗೆಯೇ ಗಲ್ಫ್ ಕಮಿಟಿಯ ಎಲ್ಲಾ ಪ್ರವಾಸಿ ಸಹೋದರರ ಸಹಾಯ ಸಹಕಾರವನ್ನು ವಿಶೇಷವಾಗಿ ಸ್ಮರಿಸಲಾಯಿತು.  

ಗಲ್ಫ್ ಕಮಿಟಿ ಅದ್ಯಕ್ಷರಾದ ಅಶ್ರಫ್ ಬಿಳಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ಫೋನ್ ಮುಖಾಂತರ ಶುಭಾಷಯ ತಿಳಿಸಿದರು

     ಕಾರ್ಯಕ್ರಮದ ಅದ್ಯಕ್ಷತೆಯನ್ನು ಹಮೀದ್ ಎಂಐ, ಸ್ವಾಗತ ಭಾಷಣ ಸಲಾಮ್ ಕಡಮಕ್ಕಲ್, ಕಿರಾಅತ್ ಆರಿಸ್ ಆಚು, ಉದ್ಘಾಟನಯನ್ನು ಶಂಸುದ್ದೀನ್ ಮುಸ್ಲಿಯಾರ್ ನೆರವೇರಿಸಿದರು. ನಿರೂಪಣಾ ಕಾರ್ಯಕ್ರಮವು ನಿಝಾರ್ ಶೈನ್ ರವರು ಮನಮೋಹಕ ಶೈಲಿಯಲ್ಲಿ ನಡೆಸಿಕೊಟ್ಟರು.