ಸುಳ್ಯ : ಇಷ್ಕ್ ಮಜ್ಲೀಸ್ ಕಾರ್ಯಕ್ರಮದಲ್ಲಿ ಉದ್ಯಮಿ ಹಾರಿಸ್ ಭಾರ್ಪಣೆ ಯವರಿಗೆ ಸನ್ಮಾನ
ಸುಳ್ಯ: ಪೆರಾಜೆ ಅಲ್ ಅಮೀನ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಅಧ್ಯಾತ್ಮಿಕ ಸಂಗಮ – ಇಷ್ಕ್ ಮಜ್ಲೀಸ್’ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹವಾಗಿ ತೊಡಗಿಸಿಕೊಂಡಿರುವ ಅಲ್ಪಸಂಖ್ಯಾತರ ಸೊಸೈಟಿಯ ಮಾಜಿ ನಿರ್ದೇಶಕ, ಜೈಭಾರತ್ ಯುವಕ ಮಂಡಲ, ಗಾಂಧಿನಗರ ಇದರ ಸದಸ್ಯ ಹಾಗೂ ಉದ್ಯಮಿ ಹಾರಿಸ್ ಭಾರ್ಪಣೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫಾ, ಎಂ.ವೈ.ಎಫ್. ಅಧ್ಯಕ್ಷ ಉಮ್ಮರ್ ಕೆ.ಎಸ್. ಮಿರಝ್ ಸುಳ್ಯ, ಉನೈಸ್ ಪೆರಾಜೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಬಿ. ಇಬ್ರಾಹಿಂ, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಇಕ್ಬಾಲ್ ಸುಣ್ಣಮೂಲೆ, ಮುನಾಫರ್ ನಾವೂರು, ನವಾಝ್ ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







m


Scroll To Top