ಅಧ್ಯಕ್ಷರಾಗಿ ಖಾದರ್ ಎ.ಕೆ.ಜಿ ,ಪ್ರಧಾನ ಕಾರ್ಯದರ್ಶಿ: ಕಬೀರ್ ಲಿಮ್ರಾ ಅಯ್ಕೆ
ಸುಳ್ಯ: ಸಮಾಜಸೇವೆ, ಕ್ರೀಡೆ, ಶೈಕ್ಷಣಿಕ ಪ್ರೋತ್ಸಾಹ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ‘ಇಬ್ಬನಿ ಸುಳ್ಯ’ ಸಂಘಟನೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು. ಈ ಮಹಾಸಭೆಯಲ್ಲಿ 2026-27ನೇ ಸಾಲಿಗೆ ಸಂಘಟನೆಯನ್ನು ಮುನ್ನಡೆಸಲು ನೂತನ ಪದಾಧಿಕಾರಿಗಳ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

2026-27ನೇ ಸಾಲಿನ ನೂತನ ಪದಾಧಿಕಾರಿಗಳು
– ಅಧ್ಯಕ್ಷರು: ಖಾದರ್ ಎ.ಕೆ.ಜಿ
– ಉಪಾಧ್ಯಕ್ಷರು: ಸಿಯಾದ್ ಪಾರೆ
– ಪ್ರಧಾನ ಕಾರ್ಯದರ್ಶಿ: ಕಬೀರ್ ಲಿಮ್ರಾ
– ಜೊತೆ ಕಾರ್ಯದರ್ಶಿ: ಶಹನವಾಝ್ ಶೇಖ್
– ಸಂಘಟನಾ ಕಾರ್ಯದರ್ಶಿ: ತೌಫೀರ್ ಅಹ್ಮದ್
– ಕೋಶಾಧಿಕಾರಿ: ಅಬೂತಾಹಿರ್ ಪ್ರಗತಿ ಯನ್ನು ಅಯ್ಕೆ ಮಾಡಲಾಯಿತು