Featured, ಇತರೆ

ಸಂವಿಧಾನ ದಿನದ ಅಂಗವಾಗಿ SKSSF ಗೂನಡ್ಕ ಶಾಖೆಯಿಂದ ಸ್ವಚ್ಛತಾ ಅಭಿಯಾನ

ಗೂನಡ್ಕ: ಮೊಹಿಯದ್ದೀನ್ ಜುಮಾ ಮಸೀದಿ ಪೇರಡ್ಕ ಹಾಗೂ SKSSF ಗೂನಡ್ಕ ಶಾಖೆಯ ವತಿಯಿಂದ ಸಂವಿಧಾನ ದಿನದ ಪ್ರಯುಕ್ತ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೆಳಗ್ಗೆ 8.30ಕ್ಕೆ ಪೇರಡ್ಕ ಖತೀಬರಾದ ಅಹಮ್ಮದ್ ನಹೀಂ ಅಬರಿ ಫೈಝಿ ಅವರು ದುಆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷರಾದ ಪಿ.ಕೆ. ಉಮ್ಮರ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್, SKSSF ಗೂನಡ್ಕ ಶಾಖೆಯ ಅಧ್ಯಕ್ಷರಾದ ಸಾಜಿದ್ ಅಝ್ಹರಿ, ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್, SKSSF ಸುಳ್ಯ ಕ್ಲಸ್ಟರ್ ಕೋಶಾಧಿಕಾರಿ ಖಲೀಲ್ ಪೇರಡ್ಕ, ಉಪಾಧ್ಯಕ್ಷರಾದ ಸಾದುಮಾನ್, ಜಿ.ಕೆ. ಹಮೀದ್, ಸಮದ್ ಪಾಶಾ ಹಾಗೂ ಹಕೀಂ ದರ್ಕಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರು ಸ್ವಚ್ಛತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಶಂಸಿಸಿದರು.