ನೆಲ್ಯಾಡಿ: ಜನವರಿ 2. ನೆಲ್ಯಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವ ಉಪ್ಪಿನಂಗಡಿ ಮೂಲದ ಮೋನಕಾ ನೆಲೆಡಿಯಲ್ಲಿ ತಮ್ಮ 35,000ಗಳನ್ನು ಕಳೆದುಕೊಂಡಿದ್ದರು, SDPI ನೆಲ್ಯಾಡಿ ಗ್ರಾಮ ಸಮಿತಿಯ ಸದಸ್ಯರಾದ ಶರೀಫ್ ರವರಿಗೆ ಈ ಹಣವು ಸಿಕ್ಕಿತ್ತು, ಕೂಡಲೇ ಶರೀಫ್ ರವರು ಹಣ ಸಿಕ್ಕಿರುವುದಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಸಂದೇಶ ರವಾನಿಸಿದರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಿದರು.
ಕೆಲವೇ ನಿಮಿಷಗಳಲ್ಲಿ ಈ ಸಂದೇಶವು ಸುತ್ತಮುತ್ತಲಿನ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಆಗಿತ್ತು. ಹಣ ಕಳೆದುಕೊಂಡ ಮೊನಾಕರವರು ಶರೀಫ್ ರವರನ್ನು ಸಂಪರ್ಕಿಸಿ ಹಣ ತನ್ನದೇ ಎಂದು ಖಾತರಿಪಡಿಸಿದರು, ತಕ್ಷಣ ಅವರ ಬಳಿಗೆ ತೆರಳಿ ಹಣವನ್ನು ಹಿಂತಿರುಗಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ.





m
