Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಮದ್ರಸ ಗಣರಾಜ್ಯೋತ್ಸವ ಆಚರಣೆ

“ಭಾರತದ ಸಂವಿಧಾನ ಪ್ರಜೆಗಳ ಬದುಕಿನ ಹಕ್ಕುಗಳನ್ನು ಖಾತರಿಪಡಿಸುತ್ತದೆ” : ಲತೀಫ್ ಸಖಾಫಿ ಗೂನಡ್ಕ

ಸುಳ್ಯ : ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ರಿ ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ವತಿಯಿಂದ ದೇಶದ ಎಪ್ಪತ್ತಾರನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ಬಶೀರ್ ಬಾಳಮಕ್ಕಿರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಹಯಾತುಲ್ ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಜಟ್ಟಿಪಳ್ಳ ಧ್ವಜಾರೋಹಣ ನೆರವೇರಿಸಿದರು.ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಪ್ರಾಸ್ಥಾವಿಕ ಭಾಷಣದೊಂದಿಗೆ ಸ್ವಾಗತಿಸಿ ಗಣರಾಜ್ಯೋತ್ಸವದ ಹಿನ್ನಲೆಯನ್ನು ವಿವರಿಸಿದ ಅವರು ಭಾರತದ ಸಂವಿಧಾನ ಜಗತ್ತಿಗೆ ಮಾದರಿಯೆಂದರು.

ವೀಡಿಯೋ ಜಲಕ್👇


ವಿಧ್ಯಾರ್ಥಿಗಳು ರಾಷ್ಟ್ರ ಗೀತೆ,ದೇಶ ಭಕ್ತಿ ಗೀತೆ ಹಾಡಿದರು.ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿಯವರು ಸಂವಿಧಾನ ಪೀಠಿಕೆ ವಾಚಿಸಿದರು. ಮುಖ್ಯೋಪಾದ್ಯಯರಾದ  ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸಂದೇಶ ಭಾಷಣ ಗೈದು ವಿವಿಧ ಧರ್ಮ, ಜಾತಿ, ವರ್ಗ, ವರ್ಣಗಳಿಂದ ಭವ್ಯ ಭಾರತದ ಸೌಂಧರ್ಯತೆ ಇನ್ನಷ್ಟು ಹೆಚ್ಚುತ್ತಿದೆ.

ಆಯಾ ಧರ್ಮಾನುಯಾಯಿಗಳು ತನ್ನ ಧರ್ಮದ ಆಚಾರಾನುಷ್ಠಾನಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಲು ಸಂವಿಧಾನ ನೀಡಿದ ಕೊಡುಗೆ ಅಪಾರವಾಗಿದ್ದು,ಅದನ್ನು ಅಳವಡಿಸಿಕೊಂಡು ನಾಡಿನ ಸರ್ವರೊಂದಿಗೂ ಆತ್ಮೀಯವಾಗಿರಬೇಕೆಂದು ಸಲಹೆ ನೀಡಿದರು.

ಈ ಸಂಧಂರ್ಭ ಸ್ಮಾರ್ಟ್ ಸ್ಕಾಲರ್ ಶಿಫ್ ಎಕ್ಸಾಂ ಮತ್ತು ಮದ್ರಸ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಭಾಗವಹಿಸಿದ ರಕ್ಷಕ ಪೋಷಕರು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು

m

Related Posts