ಗುತ್ತಿಗಾರು, ಜ.26; ಅನ್ಸಾರುಲ್ ಮುಸ್ಲಿಮೀನ್ ಎಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು ಇದರ 2025 ನೇ ಸಾಲಿನ ವಾರ್ಷಿಕ ಮಹಾಸಭೆ ಗುತ್ತಿಗಾರು ಮದರಸ ವಠಾರದಲ್ಲಿ ಜರುಗಿತು.
ಸುಲೈಮಾನ್ ಸಅದಿ ಅವರು ದುವಾ ದೊಂದಿಗೆ ಸಭೆ ಉದ್ಘಾಟಿಸಿದರು.ನಿಕಟಪೂರ್ವ ಕಾರ್ಯದರ್ಶಿ ಕಲಂದರ್ ಬಾಕಿಲ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.
ಸಭೆಯಲ್ಲಿ 2025-26ನೇ ಸಾಲಿನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಮೀದ್ ಎಚ್ ಎಂ, ಉಪಾಧ್ಯಕ್ಷ ಆಸಿಫ್ ವಳಲಂಬೆ, ಪ್ರ.ಕಾರ್ಯದರ್ಶಿ ಕಲಂದರ್ ಬಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಸಮದ್ ಹಾಗೂ ರಾಝಿಕ್ ವಿ ಆಯ್ಕೆಯಾದರು.
ಸಭೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಹಝ್ಝಿನ್ ಹಾರಿಸ್ ಸಅದಿ ಉಸ್ತಾದರು ಸ್ವಾಗತಿಸಿ ಸಮದ್ ಬಾಕಿಲ ವಂಧಿಸಿದರು.
ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು : ಪ್ರಜಾಪ್ರಭುತ್ವ ದಿನಾ ಆಚರಣೆ
ಮಾರ್ಚ್ 1 ಹಾಗೂ ಮಾರ್ಚ್ 2 ಗುತ್ತಿಗಾರಿನಲ್ಲಿ ದೇವಶ್ಯ ಗೌಡ ಕಪ್-2025
ಗುತ್ತಿಗಾರು : ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅನುಸ್ಮರಣಾ ಕಾರ್ಯಕ್ರಮ





m

