ತಾಲೂಕಿನ ಸಮಾಜ ಮತ್ತು ಸಮುದಾಯದ ಸೇವೆಯಲ್ಲಿ ಗುರುತಿಸಿ ಕೊಂಡ ಕೆಲವು ಯುವಕರನ್ನು ಸಂಘಟಿಸಿ ರಚಿತವಾಗಿದೆ ಮುಸ್ಲಿಂ ಯೂತ್ ಫೆಡರೇಶನ್ ಯುವಕರ ನಾಯಕತ್ವ, ಸಾಮಾಜಿಕ, ಸೌಹಾರ್ದತೆ, ಮತ್ತು ಸಮುದಾಯ ಸೇವೆಯನ್ನು ಪ್ರೋತ್ಸಾಹಿಸುವುದು ಈ ಸಂಘಟನೆಯ ಮುಖ್ಯ
ಗುರಿಯಾಗಿರಲಿ : ಕೆ ಎಮ್ ಮುಸ್ತಫಾ

ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ,ಹಿದಾಯ ಫೌಂಡೇಶನ್ ಮಂಗಳೂರು. ಹಾಗೂ ಯನೆಪೋಯ ಮೆಡಿಕಲ್ ಕಾಲೇಜ್ & ಆಸ್ಪತ್ರೆ ಇದರ ವತಿಯಿಂದ ಜನವರಿ 19 ರಂದು ನಡೆದ ಆರೋಗ್ಯ ಮೇಳದಲ್ಲಿ ಕಣ್ಣಿನ ತಪಾಸಣೆ ಯಲ್ಲಿ ಗುರುತಿಸಲಾದ 126 ಫಲಾನುಭವಿಗಳಿಗೆ ಸುಮಾರು ರೂ 1.25 ಲಕ್ಷ ಮೌಲ್ಯದ ಉಚಿತ ಕನ್ನಡಕ ವಿತರಣಾ ಸಮಾರಂಭ ಸುಳ್ಯ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣ ನಡೆಯಿತು

ತಾಲೂಕಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಯುವಕರನ್ನು ಒಟ್ಟುಗೂಡಿಸಿ, ಸಾಮೂಹಿಕ ಸೇವಾ ಯೋಜನೆಗಳನ್ನು ರೂಪಿಸುವುದು ನಮ್ಮ ಸಂಘಟನೆಯ ಉದ್ದೇಶ. ಸಾಮಾಜಿಕ ಸೌಹಾರ್ದತೆ ಭಾವೈಕ್ಯತೆಯನ್ನು ಬಲಪಡಿಸಿ. ಸಾಮಾಜಿಕ ಬಂಧವನ್ನು ಉತ್ತೇಜಿಸುವ ಪ್ರಯತ್ನ ವಾಗಲಿದೆ : ಕೆ ಎಸ್ ಉಮ್ಮರ್ ಅಧ್ಯಕ್ಷ ರು. ಎಮ್ ವೈ ಎಫ್

ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಉಡುಪಿ ಜಿಲ್ಲಾ ಮೀಫ್ ಉಪಾಧ್ಯಕ್ಷ ಕೆ ಯಮ್ ಮುಸ್ತಫಾ ಇವರು ನೆರವೇರಿಸಿದರು ಅಧ್ಯಕ್ಷತೆಯನ್ನು ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ,ಇದರ ಅಧ್ಯಕ್ಷರಾದ ಕೆ ಎಸ್ ಉಮ್ಮರ್ ವಹಿಸಿದರು. ಸುಳ್ಯ ಕಸಬಾ ಗ್ರಾಮದ ಗಾಂಧಿನಗರ,ಗುರುಂಪು, ಕೆರೆಮೂಲೆ
ನಾವೂರು,ಬೋರುಗುಡ್ಡೆ ಭಾಗದ ಜನರಿಗೆ ಇಂದು ಉಚಿತ ಕನ್ನಡಕ ವಿತರಣೆ ನಡೆಯಿತು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ. ಮಹಮ್ಮದ್ ಕೆಎಂಎಸ್, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್,ಎಪಿಎಂಸಿ ಮಾಜಿ ನಿರ್ದೇಶಕ ಅದo ಹಾಜಿ ಕಮ್ಮಾಡಿ, ಅಲ್ಪ ಸಂಖ್ಯಾತಸಹಕಾರಿ ಸಂಘ ದ ಅಧ್ಯಕ್ಷ ಇಕ್ಬಾಲ್ ಎಲಿ ಮಲೆ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು. ಅನ್ಸಾರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ, ಯೂತ್ ಫೆಡರೇಶನ್ ಪದಾದಿಕಾರಿಗಳಾದ ಶರೀಫ್ ಕಂಠಿ, ಮುನಫರ್ ನಾವೂರು, ಇಕ್ಬಾಲ್ ಸುಣ್ಣ ಮೂಲೆ, ರಶೀದ್ ಜಟ್ಟಿಪ್ಪಳ್ಳ, ಉನೈಸ್ ಪೆರಾಜೆ,ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು. ಕನ್ನಡಕವನ್ನು ಹಿದಾಯ ಫೌಂಡೇಶನ್ ಮಂಗಳೂರು ಸಂಸ್ಥೆಯು ಪ್ರಾಯೋಜಿಸಲಾಗಿತ್ತು. ಶರೀಫ್ ಕಂಠಿ, ಸ್ವಾಗತಿಸಿ ಇಕ್ಬಾಲ್ ಸುಣ್ಣ ಮೂಲೆ ನಿರೂಪಣೆ/ ಧನ್ಯವಾದ ಸಮರ್ಪಿಸಿದರು





m

