ಬೆಳ್ಳಾರೆ : ಸಮಸ್ತ ವಿದ್ಯಾಭ್ಯಾಸ ಮಂಡಳಿ ಅಂಗೀಕ್ರತ ಮದರಸಗಳಲ್ಲಿ ಏಕ ಕಾಲದಲ್ಲಿ ನಡೆಸುವ 5,7,10, 12 ತರಗತಿಯ ಪಬ್ಲಿಕ್ ಪರೀಕ್ಷೆ ಪೆಬ್ರವರಿ 8 ರಿಂದ 10 ರ ವರೆಗೆ ದೇಶ ವಿದೇಶಗಳಲ್ಲಿ ನಡೆಯಲಿದ್ದು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಸುಮಾರು 72 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಮೇಲ್ವಿಚಾರಕರಾಗಿ ಬಹು.ಹಸೈನಾರ್ ಫೈಝಿ ಹಾಗೂ ಬಹು. ಇಬ್ರಾಹಿಂ ವಹಬಿ ಆಗಮಿಸಿದರು. ಬೆಳ್ಳಾರೆ ಮದರಸ ಅಧ್ಯಾಪಕರುಗಳಾದ ಬಹು ಜೈನುದ್ದೀನ್ ಮುಸ್ಲಿಯಾರ್ ಹಾಗೂ ಬಹು ಝಕರಿಯ್ಯಾ ಮೌಲವಿ ಸಹಕರಿಸಿದರು. ಬೆಳ್ಳಾರೆ ಝಕರಿಯ್ಯಾ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಯು ಎಚ್ ಅಬೂಬಕ್ಕರ್, ಪ್ರದಾನ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಸದಸ್ಯರಾದ ಬಶೀರ್ ಕೆ.ಎ , ಅಝರುದ್ದೀನ್ ಉಪಸ್ಥಿತರಿದ್ದರು.







m
